ಕರ್ನಾಟಕ

karnataka

ETV Bharat / state

ಸಾವರ್ಕರ್ ಫೋಟೊ ಇರುವ ಫ್ಲೆಕ್ಸ್​​​ಗೆ ಬಿತ್ತು ಬ್ಲೇಡ್.. ಕಿಡಿಗೇಡಿಗಳ ಕೃತ್ಯಕ್ಕೆ ಖಂಡನೆ - ಈಟಿವಿ ಭಾರತ ಕನ್ನಡ

ಹೊನ್ನಾಳಿಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಣೇಶೋತ್ಸವ ಸಮಿತಿ ಅಳಡಿಸಿದ್ದ ಸಾವರ್ಕರ್ ಫೋಟೋ ಇರುವ ಫ್ಲೆಕ್ಸ್​ ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.

ಸಾವರ್ಕರ್ ಫೋಟೊ ಇರುವ ಫ್ಲೆಕ್ಸ್ ಗೆ ಬಿತ್ತು ಬ್ಲೇಡ್..ಕಿಡಿಗೇಡಿಗಳ ಕೃತ್ಯಕ್ಕೆ ಖಂಡನೆ
ಸಾವರ್ಕರ್ ಫೋಟೊ ಇರುವ ಫ್ಲೆಕ್ಸ್ ಗೆ ಬಿತ್ತು ಬ್ಲೇಡ್..ಕಿಡಿಗೇಡಿಗಳ ಕೃತ್ಯಕ್ಕೆ ಖಂಡನೆ

By

Published : Sep 1, 2022, 4:05 PM IST

Updated : Sep 1, 2022, 4:21 PM IST

ದಾವಣಗೆರೆ: ಜಿಲ್ಲೆಯ ಹೊನ್ನಾಳಿಯಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗಣೇಶೋತ್ಸವ ಸಮಿತಿ ಸಾವರ್ಕರ್ ಫೋಟೊ ಇರುವ ಫ್ಲೆಕ್ಸ್ ಅಳವಡಿಸಿತ್ತು. ಹೊನ್ನಾಳಿ ಪಟ್ಟಣ ಹಾಗೂ ಗೊಲ್ಲರಹಳ್ಳಿಯ ಹೊನ್ನಾಳಿ ಮಾರ್ಗದಲ್ಲಿ ಹಾಕಲಾಗಿದ್ದ ಫ್ಲೆಕ್ಸ್​​​ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.

ಅಲ್ಲದೆ ಫ್ಲೆಕ್ಸ್ ಗಳಲ್ಲಿ ವೀರ ಸಾವರ್ಕರ್ ಹಾಗೂ ಶಾಸಕ ರೇಣುಕಾಚಾರ್ಯ ಅವರ ಭಾವಚಿತ್ರವನ್ನು ಗುರಿಯಾಗಿಸಿ ಫ್ಲೆಕ್ಸ್ ಹರಿದು ಹಾಕಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇನ್ನು ಕಳೆದ ವಾರ ಹೊನ್ನಾಳಿಯಲ್ಲಿ ಅಳವಡಿಸಲಾಗಿದ್ದ ಸಾವರ್ಕರ್ ಫ್ಲೆಕ್ಸ್ ಗಾಳಿಗೆ ಹರಿದಿತ್ತು. ಇದನ್ನು ಕಿಡಿಗೇಡಿಗಳು ಹರಿದು ಹಾಕಿರುವ ಬಗ್ಗೆ ವದಂತಿ ಹಬ್ಬಿತ್ತು. ಬಳಿಕ ಪೊಲೀಸರು ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಫ್ಲೆಕ್ಸ್ ಗಾಳಿಯ ರಭಸಕ್ಕೆ ಹರಿದು ಹೋಗಿರುವುದು ಕಂಡು ಬಂದಿತ್ತು.‌

ಸಾವರ್ಕರ್ ಫೋಟೊ ಇರುವ ಫ್ಲೆಕ್ಸ್ ಗೆ ಬಿತ್ತು ಬ್ಲೇಡ್..ಕಿಡಿಗೇಡಿಗಳ ಕೃತ್ಯಕ್ಕೆ ಖಂಡನೆ

ಗೌರಿ ಗಣೇಶ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಹೊನ್ನಾಳಿ ಪಟ್ಟಣದಾದ್ಯಂತ ಸಾವರ್ಕರ್, ಬಾಲಗಂಗಾಧರ ತಿಲಕ್, ಸಂಗೊಳ್ಳಿ ರಾಯಣ್ಣ ಸೇರಿದಂತೆ ಸ್ವತಂತ್ರ ಹೋರಾಟಗಾರರ ಫ್ಲಕ್ಸ್ ಗಳನ್ನು ಅಳವಡಿಸಲಾಗಿದ್ದು, ಕಿಡಿಗೇಡಿಗಳು ಸಾವರ್ಕರ್ ಫೋಟೋ ಅಳವಡಿಸಿರುವ ಫ್ಲೆಕ್ಸ್ ಗಳನ್ನು ಗುರಿಯಾಗಿಸಿ ಹರಿದು ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ :ಸಾವರ್ಕರ್ ಫೋಟೊ ವಿವಾದ.. ಅಂಬೇಡ್ಕರ್, ಬಸವಣ್ಣ ಫೋಟೊ ಹಂಚಿದ ಯುವಕರು

Last Updated : Sep 1, 2022, 4:21 PM IST

ABOUT THE AUTHOR

...view details