ದಾವಣಗೆರೆ: ನಗರದ ಕೆ ಇ ಬಿ ವೃತ್ತದ ಸಮೀಪದಲ್ಲಿರುವ ಟಿವಿ ಶೋ ರೂಮ್ ನಿನ್ನೆ ರಾತ್ರಿಯಿಂದಲೂ ಹೊತ್ತಿ ಉರಿಯುತ್ತಿದ್ದು, ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.
ದಾವಣಗೆರೆಯಲ್ಲಿ ರಾತ್ರಿಯಿಡೀ ಹೊತ್ತು ಉರಿದ ಟಿವಿ ಶೋರೂಂ...ಬೆಂಕಿ ನಂದಿಸಲು ಹರಸಾಹಸ - undefined
ನಗರದ ಕೆ ಇ ಬಿ ವೃತ್ತದ ಸಮೀಪದಲ್ಲಿರುವ ಟಿವಿ ಶೋ ರೂಮ್ ನಿನ್ನೆ ರಾತ್ರಿಯಿಂದಲೂ ಹೊತ್ತಿ ಉರಿಯುತ್ತಿದ್ದು, ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.

ಬೆಂಕಿ ನಂದಿಸಲು ಹರಸಾಹಸ
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಶೋರೂಂ ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಬಳಿಕ ವಿಸ್ತರಿಸಿತು. ಕಳೆದ ರಾತ್ರಿಯಿಂದ ಬೆಂಕಿ ನಿಯಂತ್ರಣಕ್ಕೆ ಹರಸಾಹಸ ಪಡಲಾಗುತ್ತಿದೆ. ಆದರೂ ಸಂಪೂರ್ಣವಾಗಿ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ.
ಬೆಂಕಿ ನಂದಿಸಲು ಹರಸಾಹಸ
ರಾತ್ರಿಯಿಡಿ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಕಿ ನಿಯಂತ್ರಿಸಲು ಕಷ್ಟವಾಗುತ್ತಿದೆ. ಬೆಳಗ್ಗೆಯಿಂದ ಮತ್ತೆ ಬೆಂಕಿ ನಂದಿಸುವ ಕಾರ್ಯ ಮುಂದುವರಿಸಲಾಗಿದ್ದು, ಕೋಟ್ಯಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ಉಪಕರಣಗಳು ಬೆಂಕಿಗಾಹುತಿಯಾಗಿವೆ ಎಂದು ಅಂದಾಜಿಸಲಾಗಿದೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.