ದಾವಣಗೆರೆ: ಶಾರ್ಟ್ ಸರ್ಕ್ಯೂಟ್ನಿಂದಾಗಿ ನಗರದ ಲಾಯರ್ ರಸ್ತೆಯಲ್ಲಿರುವ ಎಲೆಕ್ಟ್ರಿಕ್ ಬೈಕ್ ಶೋ ರೂಮ್ಗೆ ಬೆಂಕಿ ತಗುಲಿದ್ದು, ಧಗ ಧಗನೆ ಹೊತ್ತಿ ಉರಿದಿದೆ.
ದಾವಣಗೆರೆಯಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ ಶೋ ರೂಮ್! - ದಾವಣಗೆರೆ ಎಲೆಕ್ಟ್ರಿಕಲ್ ಬೈಕ್ ಶೋ ರೂಂ
ದಾವಣಗೆರೆಯಲ್ಲಿ ಹೊಸದಾಗಿ ಆರಂಭವಾಗಿರುವ ಎಲೆಕ್ಟ್ರಿಕ್ ಬೈಕ್ ಶೋ ರೂಮ್ನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಶೋ ರೂಮ್ ಧಗ ಧಗ ಹೊತ್ತಿ ಉರಿದಿದೆ.
ಮಧ್ಯಾಹ್ನ 2.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದಲ್ಲಿ ಮನೆಗಳು, ಮಳಿಗೆಗಳು ಇದ್ದರಿಂದ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಜನರು, ಮಹಿಳೆಯರು ಆತಂಕದಿಂದ ಮನೆಯಿಂದ ಹೊರ ಓಡಿ ಬಂದರು. ಸುಮಾರು 50 ಸಾವಿರ ಬೈಕ್ಗಳಿದ್ದ ಶೋ ರೂಮ್ ಇದಾಗಿದ್ದು, ಹನ್ನೆರಡಕ್ಕೂ ಹೆಚ್ಚು ಬೈಕ್ಗಳು ಸುಟ್ಟು ಕರಕಲಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಕೆಲ ದಿನಗಳ ಹಿಂದೆಯಷ್ಟೇ ಈ ಶೋ ರೂಮ್ ಉದ್ಘಾಟನೆ ಆಗಿತ್ತು. ಬ್ಯಾಟರಿ ಚಾಲಿತ ಸ್ಕೂಟಿ ಶೋ ರೂಮ್ ಇದಾಗಿದೆ. ದಾವಣಗೆರೆಗೆ ಪರಿಚಯಿಸಿ ಇನ್ನು ಹದಿನೈದು ದಿನಗಳಾಗಿರಲಿಲ್ಲ. ಶೋ ರೂಮ್ಗೆ ಬೆಂಕಿ ಹರಡುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.