ದಾವಣಗೆರೆ:ಹೊಸ ನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಊಟ ಮಾಡುವ ಅಕ್ಕಿ ಹಾಗೂ ಅನ್ನದಲ್ಲಿ ಹುಳುಗಳು ಕಂಡು ಬಂದಿವೆ. ಈ ಹಿನ್ನೆಲೆ ವಿದ್ಯಾರ್ಥಿಗಳು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ರು.
ಮಕ್ಕಳ ಮಧ್ಯಾಹ್ನದ ಊಟದಲ್ಲಿ ಹುಳುಗಳು ಪತ್ತೆ: ಪೋಷಕರ ಆಕ್ರೋಶ - ನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆ
ದಾವಣಗೆರೆ ತಾಲ್ಲೂಕು ಹೊಸನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ಹುಳುಗಳು ಸಿಕ್ಕಿದ್ದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಮಧ್ಯಾಹ್ನದ ಊಟದಲ್ಲಿ ಹುಳುಗಳು ಪತ್ತೆ
ದಾವಣಗೆರೆ ತಾಲೂಕು ಹೊಸನಾಯಕನಹಳ್ಳಿ ಗ್ರಾಮದ ಹೊಸ ನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ಹುಳುಗಳು ಕಂಡು ಬಂದಿವೆ. ಮಕ್ಕಳು ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾರೆ.
ಬಳಿಕ ಶಾಲೆಗೆ ಆಗಮಿಸಿದ ಪೋಷಕರು ಕೋಪಗೊಂಡು ಅಡಿಗೆ ಬಟ್ಟರನ್ನು ಕೆಲಸದಿಂದ ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ. ದಿನನಿತ್ಯ ಊಟದಲ್ಲಿ ಹುಳುಗಳು, ಸೊಳ್ಳೆಗಳು ಸಿಗುತ್ತವೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.