ಕರ್ನಾಟಕ

karnataka

ETV Bharat / state

ದಾವಣಗೆರೆ: ಚೂರಿ ಇರಿದು ತಮ್ಮನ ಕೊಂದ ಅಣ್ಣ ಪರಾರಿ - etv bharat kannada

ದಾವಣಗೆರೆಯಲ್ಲಿ ಸಹೋದರರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಆರೋಪಿ ಅಣ್ಣ ಸ್ಥಳದಿಂದ ಪರಾರಿ​ಯಾಗಿದ್ದಾನೆ.

fight-between-brothers-ends-in-murder-at-davanagere
ದಾವಣಗೆರೆ: ಚೂರಿ ಇರಿದು ತಮ್ಮನ ಕೊಂದ ಅಣ್ಣ ಪರಾರಿ

By

Published : Jul 25, 2022, 10:54 AM IST

ದಾವಣಗೆರೆ: ಸಹೋದರರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಡಾಂಗೆ ಪಾರ್ಕ್ ಬಳಿ ಭಾನುವಾರ ಸಂಜೆ ನಡೆದಿದೆ. ಅಣ್ಣನೇ ತನ್ನ ತಮ್ಮನಿಗೆ ಚೂರಿ ಇರಿದು ಕೊಲೆ‌ ಮಾಡಿ ಪರಾರಿಯಾಗಿದ್ದಾನೆ.

ದಾವಣಗೆರೆ ನಗರದ ನಿಟುವಳ್ಳಿಯ ನಿವಾಸಿ ಶೌಕತ್ ಅಲಿ (23) ಕೊಲೆಯಾದ ವ್ಯಕ್ತಿ. ಈತನ ದೊಡ್ಡಮ್ಮನ ಮಗ ಜಮೀರ್ ಪಾಷ ಕೊಲೆ ಮಾಡಿದ ಆರೋಪಿ. ಹಲವು ವರ್ಷಗಳಿಂದ ಡಾಂಗೆ ಪಾರ್ಕ್ ಕಾಂಪೌಂಡ್ ಬಳಿ ತಾಯಿ ಜೊತೆ ಈ ಇಬ್ಬರೂ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದರು.

ಆರೋಪಿ ಜಮೀರ್ ಪಾಷ

ಸಹೋದರರಿಬ್ಬರೂ ಪಂಚರ್ ಹಾಕಲು ಬಳಸುವ ಸೊಲುಷನ್ ಸೇವನೆಯ ಚಟದ ದಾಸರಾಗಿದ್ದರು. ಸ್ಥಳೀಯರ ಜೊತೆ ಹಲವು ಸಲ ಜಗಳವಾಡಿದ್ದರು, ಇವರನ್ನ ಬೇರೆ ಕಡೆ ಸ್ಥಳಾಂತರಿಸಿದ್ದರೂ ಪುನಃ ಇಲ್ಲೆ ಬಂದು ವಾಸ ಮಾಡುತ್ತಿದ್ದರು ಎನ್ನಲಾಗಿದೆ.

ಅದರೆ ಭಾನುವಾರ ಜಮೀರ್‌ ಹಾಗು ಶೌಕತ್ ನಡುವೆ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿದೆ. ಆಗ ಶೌಕತ್ ಅಲಿಗೆ ಜಮೀರ್ ಚೂರಿಯಿಂದ‌ ಇರಿದು ಪರಾರಿಯಾಗಿದ್ದಾನೆ. ‌ಎಸ್​​ಪಿ ಸಿಬಿ ರಿಷ್ಯಂತ್ ಹಾಗೂ ಕೆಟಿಜೆ‌ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಕೆಟೆಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸಾಮೂಹಿಕ ಅತ್ಯಾಚಾರ, ವಂಚನೆ: ಯುಪಿ ಮಾಜಿ ಶಾಸಕನ ಮಗ ಅರೆಸ್ಟ್‌

ABOUT THE AUTHOR

...view details