ದಾವಣಗೆರೆ:ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ಮೇಲೆ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಇಲ್ಲಿನ ಎಂಸಿಸಿಬಿ ಬ್ಲಾಕ್ ಮಾಮಾಸ್ ಜಾಯಿಂಟ್ ರೋಡ್ ಬಳಿ ನಡೆದಿದೆ.
ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಹಮ್ಮದ್ ಸುಹೀಲ್ ಎಂಬ ಯುವಕನ ಮೇಲೆ ಫಾರೂಕ್, ಮೊಮಿನ್ ಬಿಲ್ಡರ್, ತನ್ನು, ನಯಾಜ್ ಜತೆ ಹಲವರು ಸೇರಿ ಹಲ್ಲೆ ಮಾಡಿದ್ದಾರೆ. ಮಾಮಾಸ್ ಜಾಯಿಂಟ್ ರೋಡ್ ಬಳಿ ಇರುವ ಲಿಮಿಟ್ಸ್ ಜಿಮ್ಗೆ ಮಹಮ್ಮದ್ ಸುಹೀಲ್ ಅಡ್ಮಿಶನ್ಗೆ ತೆರಳಿದ್ದ ವೇಳೆ, ಈತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಕಾಲಲ್ಲಿ ಚಾಕು, ಬ್ಲೇಡ್, ನೈಲ್ ಕಟರ್ ಕಟ್ಟಿಕೊಂಡು ಏರ್ಪೋರ್ಟ್ಗೆ ಬಂದ ಗರ್ಭಿಣಿ: ಕೆಐಎಎಲ್ ಪೊಲೀಸರಿಂದ ವಶಕ್ಕೆ
ಗಾಯಗೊಂಡ ಸುಹೀಲ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುಹೀಲ್ ಜತೆ ಆತನ ಸ್ನೇಹಿತ ಆಸೀಫ್ ಕೊಲ್ಲಾರಿ ಎಂಬ ಯುವಕನ ಮೇಲೂ ಹಲ್ಲೆ ನಡೆದಿದೆ. ಯುವಕರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದ್ದು, 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.