ಕರ್ನಾಟಕ

karnataka

ETV Bharat / state

ಲಾಕ್​​​ಡೌನ್​​​​ನಿಂದ ಸಂಕಷ್ಟಕ್ಕೀಡಾಗಿದ್ದ ರೈತರಿಗೆ ಮಳೆಯಿಂದಲೂ ಕಂಟಕ - davanagere news

ಕೊರೊನಾ ಲಾಕ್​​ಡೌನ್​ನಿಂದಾಗಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಸಂಕಷ್ಟಕ್ಕೀಡಾಗಿದ್ದರು. ಈ ನಡುವೆ ಅಕಾಲಿಕ ಮಳೆಯಿಂದಾಗಿ ಬೆಳೆ ಸಂಪುರ್ಣ ನಾಶವಾಗಿದೆ. ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿನ ಉಚ್ಚಂಗಿ ದುರ್ಗದಲ್ಲಿ ನಿನ್ನೆ ರಾತ್ರಿ ಸುರಿದ ಅಕಾಲಿಕ ಮಳೆ, ಗಾಳಿಯಿಂದಾಗಿ ಬಾಳೆ ಗಿಡಗಳು ಸಂಪೂರ್ಣ ನಾಶವಾಗಿವೆ.

ಲಾಕ್​​​ಡೌನ್​​​​ನಿಂದ ಸಂಕಷ್ಟಕ್ಕೀಡಾಗಿದ್ದ ರೈತರಿಗೆ ಮಳೆಯಿಂದಲೂ ಕಂಟಕ

By

Published : Apr 6, 2020, 6:37 PM IST

ದಾವಣಗೆರೆ: ನಿನ್ನೆ ರಾತ್ರಿ ಸುರಿದ ಅಕಾಲಿಕ ಮಳೆ, ಗಾಳಿಯಿಂದಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಗಾಳಿ ಮಳೆಯಿಂದಾಗಿ ಬೆವರು ಸುರಿಸಿ ಬೆಳೆದಿದ್ದ ಬಾಳೆ ಗಿಡಗಳು ಸಂಪೂರ್ಣ ನೆಲಕ್ಕಚ್ಚಿರುವ ಘಟನೆ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿನ ಉಚ್ಚಂಗಿದುರ್ಗದಲ್ಲಿ ನಡೆದಿದೆ.

ಕೊರೊನಾ ಲಾಕ್​​ಡೌನ್​ನಿಂದಾಗಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೀಡಾಗಿದ್ದರು. ಈ ನಡುವೆ ಅಕಾಲಿಕ ಮಳೆಯಿಂದಾಗಿ ಬೆಳೆ ಸಂಪುರ್ಣ ನಾಶವಾಗಿದೆ.

ಸುಮಾರು 3 ಎಕರೆಯಲ್ಲಿ ಬೆಳೆದ ಬಾಳೆ ಇನ್ನೂ ಚಿಗುರೊಡೆಯುವ ಹಂತದಲ್ಲಿದೆ.‌ ಬಾಳೆ ಕೈಗೆ ಸೇರುವ ಮುಂಚೆ ಮಣ್ಣು ಸೇರಿದ್ದು ತುಂಬಾ ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಇನ್ನು ದಾವಣಗೆರೆ ತಾಲೂಕಿನ ಕಡ್ಲೇಬಾಳು, ಅರಸಾಪುರ, ಕಕ್ಕರಗೊಳ್ಳ ಗ್ರಾಮ ಸೇರಿದಂತೆ ಹಲವೆಡೆ ಭತ್ತ ನಾಶವಾಗಿದ್ದು, ಅನ್ನದಾತರು ಕಂಗಾಲಾಗಿದ್ದಾರೆ.

ABOUT THE AUTHOR

...view details