ಕರ್ನಾಟಕ

karnataka

ETV Bharat / state

ಜಗಳೂರು ಏತ ನೀರಾವರಿ ಯೋಜನೆ ಕಾಮಗಾರಿ ಆರಂಭ: ರೈತರ ಆಕ್ರೋಶಕ್ಕೇನು ಕಾರಣ? - ದಾವಣಗೆರೆಯಲ್ಲಿ ನೀರಾವರಿ ಕಾಮಗಾರಿ ಆರಂಭ

ಏತ ನೀರಾವರಿ ಯೋಜನೆ ಕಾಮಗಾರಿ ನಡೆಸುವ ಮೊದಲು ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ಜಮೀನುಗಳಲ್ಲಿ ಪೈಪ್​ಲೈನ್​ಗಳನ್ನು ಅಳವಡಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Farmers outrage against officers who have started irrigation work
ದಾವಣಗೆರೆಯಲ್ಲಿ ನೀರಾವರಿ ಕಾಮಗಾರಿಗೆ ರೈತರಿಂದ ಆಕ್ರೋಶ

By

Published : Jan 17, 2022, 4:40 PM IST

ದಾವಣಗೆರೆ: ಜಗಳೂರು ಏತ ನೀರಾವರಿ ಯೋಜನೆ ಕಾಮಗಾರಿ ಆರಂಭವಾಗಿದೆ. ಅಧಿಕಾರಿಗಳು ಪೊಲೀಸ್​​ ಕಣ್ಗಾವಲಿನಲ್ಲಿ ಯಾವುದೇ ಮುನ್ಸೂಚನೆ ನೀಡದೆ ರೈತರ ಜಮೀನಿನಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.


ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಬಹುತೇಕ ರೈತರ ಜಮೀನಿನಲ್ಲಿ ಬೃಹತ್ ಗಾತ್ರದ ಪೈಪ್​​​ಲೈನ್ ಅಳವಡಿಸಲಾಗುತ್ತಿದೆ. ಇದೇ ಗ್ರಾಮದ ಸರ್ವೇ ನಂಬರ್ 87ರ ಮೂಲಕ ಹರಿಹರದ ಬಳಿ ಹರಿಯುವ ತುಂಗಾಭದ್ರ ನದಿಯಿಂದ ಜಗಳೂರು ತಾಲೂಕಿನ 52 ಕೆರೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರ 668 ಕೋಟಿಗೂ ಅಧಿಕ ಹಣ ಮಂಜೂರು ಮಾಡಿದ್ದು, ಕಾಮಗಾರಿ ಕೂಡ ಶುರುವಾಗಿದೆ.

ಆದರೆ, ಕಾಮಗಾರಿ ಆರಂಭಿಸುವ ಮೊದಲು ಆಯಾ ಜಮೀನಿನ ರೈತರ ಗಮನಕ್ಕೆ ತರದೆ, ಕಾಮಗಾರಿ ನಕಾಶೆಯನ್ನೂ ನೀಡದೆ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಸರಿಯಾದ ಪರಿಹಾರ ನೀಡುವಂತೆ ರೈತರು ಹೈಕೋರ್ಟ್​​​​ ಮೊರೆ ಹೋಗಿದ್ದು, ಆದೇಶ ಪ್ರತಿ ಬರುವ ತನಕ ಕಾಮಗಾರಿಯನ್ನು ಆರಂಭಿಸಬೇಡಿ ಎಂದು ಹೇಳಿದರೂ ಕೇಳದೆ ಕಾಮಗಾರಿ ಆರಂಭಿಸಿದ್ದಾರೆ. ಯೋಜನೆಯ ಕಾಮಗಾರಿಗಾಗಿ ಕಿ.ಮೀ ಗಟ್ಟಲೆ ಪೈಪ್​​ಲೈನ್​​ ಹಾಕಲಾಗಿದೆ. ಇದಕ್ಕೆ ರೈತರಿಗೆ ಪರಿಹಾರ ಹಣ ನೀಡಲಾಗುತ್ತದೆಯೇ ಎಂದು ಕೇಳಿದ್ರೆ, ಅಧಿಕಾರಿಗಳ ಬಳಿ ಉತ್ತರವಿಲ್ಲ. ಜಮೀನಿನಲ್ಲಿ ಬೆಳೆ ಇದ್ದರೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಸಬೂಬು ಹೇಳುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಜನವರಿ 31ರವರೆಗೂ 144 ಸೆಕ್ಷನ್ ವಿಸ್ತರಣೆ

ABOUT THE AUTHOR

...view details