ದಾವಣಗೆರೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ಸ್ಪರ್ಶಿಸಿ ರೈತ ಮೃತಪಟ್ಟ ಘಟನೆ ಜಿಲ್ಲೆಯ ಮಾಯಕೊಂಡ ಸಮೀಪದ ಆಲೂರು ಗ್ರಾಮದಲ್ಲಿ ನಡೆದಿದೆ.
ದಾವಣಗೆರೆಯಲ್ಲಿ ವಿದ್ಯುತ್ ಸ್ಪರ್ಶಿಸಿ ರೈತ ಸಾವು: ಬೆಸ್ಕಾಂ ನಿರ್ಲಕ್ಷ್ಯ ಆರೋಪ - ದಾವಣಗೆರೆ ಜಿಲ್ಲೆಯ ಮಾಯಕೊಂಡ ತಾಲೂಕಿನ ಆಲೂರು
ಹೊಲದಲ್ಲಿ ವಿದ್ಯುತ್ ಶಾಕ್ನಿಂದ ರೈತ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಮಾಯಕೊಂಡ ತಾಲೂಕಿನಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಮಾಯಕೊಂಡ ತಾಲೂಕಿನ ಆಲೂರು
ಶಿವರಾಜ್(51) ಮೃತ ದುರ್ದೈವಿ. ಈತ ಬೆಳಗ್ಗೆ ಎಂದಿನಂತೆ ಜಮೀನಿಗೆ ತೆರಳಿದ್ದ. ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ವೈರ್ ತುಂಡಾಗಿ ಬಿದ್ದಿತ್ತು. ಭತ್ತದ ಗದ್ದೆಯಾದ ಕಾರಣ ವೈರ್ ತುಂಡಾಗಿ ಬಿದ್ದಿದ್ದನ್ನು ಗಮನಿಸಿರಲಿಲ್ಲ. ತುಂಡಾಗಿ ಬಿದ್ದಿದ್ದ ವೈರ್ನಲ್ಲಿ ಕರೆಂಟ್ ಕೂಡ ಪ್ರವಹಿಸುತಿತ್ತು. ವೈರ್ ತುಳಿದ ಬಳಿಕ ಜಮೀನಿನಲ್ಲೇ ವಿದ್ಯುತ್ ಶಾಕ್ನಿಂದ ಶಿವರಾಜ್ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ತಕ್ಷಣ ಜಿಲ್ಲಾ ಪಂಚಾಯಿತಿ ಸದಸ್ಯ ಬಸವಂತಪ್ಪ ಭೇಟಿ ನೀಡ ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬೆಸ್ಕಾಂ ಇಲಾಖೆಯ ಬೇಜವಾಬ್ದಾರಿಯಿಂದಲೇ ಸಾವು ಸಂಭವಿಸಿದ್ದು, ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.