ಕರ್ನಾಟಕ

karnataka

ETV Bharat / state

ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕೇಬಲ್ ಕಳ್ಳನಿಗೆ ರೈತರಿಂದ ಧರ್ಮದೇಟು - ಕೇಬಲ್​ ಕಳ್ಳತನ ಮಾಡುತ್ತಿದ್ದ ಖದೀಮ

ದಾವಣಗೆರೆ ತಾಲೂಕಿನ ಸುಲ್ತಾನಿಪುರ ಗ್ರಾಮದಲ್ಲಿ ಪಂಪ್​ಸೆಟ್​ಗೆ ಅಳವಡಿಸಿದ್ದ ಕೇಬಲ್​ಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನನ್ನು ಹಿಡಿದ ಗ್ರಾಮಸ್ಥರು ಆತನಿಗೆ ಥಳಿಸಿ ಪೊಲೀಸರಿಗೊಪ್ಪಿಸಿದರು.

Farmers beaten cable wire theft
ಕೇಬಲ್ ಕಳ್ಳನಿಗೆ ರೈತರಿಂದ ಧರ್ಮದೇಟು

By

Published : Sep 15, 2021, 3:37 PM IST

ದಾವಣಗೆರೆ:ಜಮೀನಿಗೆ ನೀರು ಹಾಯಿಸಲು ಪಂಪ್​ಸೆಟ್​​​ಗೆ ಅಳವಡಿಸಿದ್ದ ಕೇಬಲ್​​ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಸುಲ್ತಾನಿಪುರ ಗ್ರಾಮದಲ್ಲಿ ನಡೆದಿದೆ.

ಕೇಬಲ್ ಕಳ್ಳನಿಗೆ ರೈತರಿಂದ ಧರ್ಮದೇಟು

ತಾಲೂಕಿನ ಸುಲ್ತಾನಿಪುರ, ಅಣ್ಣಪುರ ಗ್ರಾಮಗಳು ಸೇರಿದಂತೆ ಹಲವು ಹಳ್ಳಿಗಳಲ್ಲಿ ಅನೇಕ ದಿನಗಳಿಂದ ಕೇಬಲ್ ಕಳ್ಳತನ ನಡೆಯುತ್ತಿತ್ತು. ಇದರಿಂದ ರೈತರು ರಾತ್ರಿಯಿಡೀ ತೋಟಕ್ಕೆ ಹೋಗಿ ಕಾಯುತ್ತಿದ್ದರು. ಇಂದು ಖದೀಮ ಬೋರ್​ವೆಲ್​​​​ ಕೇಬಲ್​ ಕತ್ತರಿಸುತ್ತಿದ್ದನು. ಇದನ್ನು ಗಮನಿಸಿದ ರೈತರು ಆರೋಪಿಯನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದರು.

ಆರೋಪಿ ಲಕ್ಷಾಂತರ ಮೌಲ್ಯದ ಕೇಬಲ್ ಹಾಗೂ ಅಡಿಕೆ ಕಳವು ಮಾಡಿದ್ದರೂ ಕೂಡ ಮಾಯಕೊಂಡ ಠಾಣಾ ಪೊಲೀಸರು ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Watch.. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿನ ಅಪಘಾತದಲ್ಲಿ ಯುವಕ-ಯುವತಿ ಸಾವು: ಭಯಾನಕ ದೃಶ್ಯ CCTVಯಲ್ಲಿ ಸೆರೆ

ABOUT THE AUTHOR

...view details