ದಾವಣಗೆರೆ: ಹಣ, ಹೆಂಡ ಹಂಚಿ ಗೆದ್ದಿರುವ ರೇಣುಕಾಚಾರ್ಯ ಅವಿವೇಕಿ ಬ್ರೋಕರ್. ಇಂತಹ ವ್ಯಕ್ತಿಯನ್ನು ಸಿಎಂ ಯಡಿಯೂರಪ್ಪ ದೂರ ಇಡಬೇಕು ಎಂದು ರೈತ ಮುಖಂಡ ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
ರೇಣುಕಾಚಾರ್ಯ ಅವಿವೇಕಿ ಬ್ರೋಕರ್: ರೈತ ಮುಖಂಡ ಚನ್ನಬಸಪ್ಪ - Davanagere News
ರೇಣುಕಾಚಾರ್ಯ ಅವಿವೇಕಿ ಬ್ರೋಕರ್. ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ದಲ್ಲಾಳಿ ಎಂದು ಆತ ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ರೈತ ಮುಖಂಡ ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಚನ್ನಬಸಪ್ಪ
ರೈತ ಮುಖಂಡ ಚನ್ನಬಸಪ್ಪ
ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ದಲ್ಲಾಳಿ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆಯನ್ನು ಖಂಡಿಸಿದ ಅವರು, ದಲ್ಲಾಳಿ ಎಂದು ಹೇಳಿಕೆಯನ್ನು ಹಿಂಪಡೆಯಬೇಕು. ಈ ರೀತಿ ಹೇಳಿಕೆ ನೀಡಿರುವುದು ಶೋಭೆ ತರುವುದಿಲ್ಲ. ಇನ್ನು ಹೇಳಿಕೆ ವಾಪಸ್ ಪಡೆಯದಿದ್ದರೆ ರೇಣುಕಾಚಾರ್ಯ ಕಂಡಲ್ಲಿ ಮಸಿ ಬಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
"ರೇಣುಕಾಚಾರ್ಯನಿಗೆ ತಾಕತ್ ಇದ್ದರೆ ಹತ್ತು ಸಾವಿರ ಜನರನ್ನು ಸೇರಿಸು, ಇಲ್ಲವಾದಲ್ಲಿ ನಾವು ಹೊನ್ನಾಳಿಯಲ್ಲಿ ಜನ್ರನ್ನು ಸೇರಿಸಿ ಪ್ರತಿಭಟನೆ ಮಾಡ್ತೀವಿ" ಎಂದು ಎಚ್ಚರಿಕೆ ನೀಡಿದರು.