ಕರ್ನಾಟಕ

karnataka

ETV Bharat / state

ಸಾಲಬಾಧೆ ತಾಳಲಾರದೇ ಸೂಳೆಕೆರೆಗೆ ಹಾರಿ ರೈತ ಆತ್ಮಹತ್ಯೆ - The slogan of Channagiri taluk

ಸಾಲಬಾಧೆ ಹಿನ್ನೆಲೆ ಕೆರೆಗೆ ಹಾರಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ನಡೆದಿದೆ.‌

Farmer commits suicide by jumping into lake
ದಾವಣಗೆರೆ: ಸಾಲ ಬಾಧೆ ತಾಳಲಾರದೆ ಕೆರೆಗೆ ಹಾರಿ ರೈತ ಆತ್ಮಹತ್ಯೆ

By

Published : Jun 22, 2020, 2:12 PM IST

ದಾವಣಗೆರೆ:ಸಾಲ ಬಾಧೆ ಹಿನ್ನೆಲೆ ಕೆರೆಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ನಡೆದಿದೆ.‌

ದಾವಣಗೆರೆ: ಸಾಲ ಬಾಧೆ ತಾಳಲಾರದೆ ಕೆರೆಗೆ ಹಾರಿ ರೈತ ಆತ್ಮಹತ್ಯೆ

ದಾವಣಗೆರೆಯ ವಿನೋಬನಗರದ ನಿವಾಸಿ 50 ವರ್ಷದ ಹೆಚ್. ಜಿ. ಪ್ರಕಾಶ್ ಆತ್ಮಹತ್ಯೆಗೆ ಶರಣಾದವರು. ನಗರದ ಆರ್​ಟಿಒ ಕಚೇರಿಯ ಬಳಿ ಟೀ ಅಂಗಡಿ ನಡೆಸುತ್ತಿದ್ದ ಅವರು ಚನ್ನಗಿರಿ ತಾಲೂಕಿನ ಕಂಚುಗಾರನಹಳ್ಳಿ ಗ್ರಾಮದ ಜಮೀನಿನಲ್ಲಿ 4 ಲಕ್ಷ ರೂಪಾಯಿಗೂ ಅಧಿಕ ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಆದರೆ, ನಷ್ಟಕ್ಕೀಡಾಗಿದ್ದರು.

ಕೃಷಿಗಾಗಿ 4 ಲಕ್ಷದವರೆಗೂ ಸಾಲ ಮಾಡಿದ್ದ ಇವರು ಸಾಲ ಬಾಧೆಯಿಂದ ನೊಂದು ಸೂಳೆಕೆರೆಯ ದಡದಲ್ಲಿ ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಮೃತದೇಹದ ಹುಡುಕಾಟ ಮುಂದುವರಿದಿದೆ. ಸಾಗರಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ABOUT THE AUTHOR

...view details