ಕರ್ನಾಟಕ

karnataka

ETV Bharat / state

ಪ್ರಸ್ತುತ ರಾಜಕೀಯ ಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಹಿಮಾ ಜೆ. ಪಟೇಲ್ - mahima j patel

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ 7ನೇ ದಿನದ ಶರವನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಪ್ರಸ್ತುತ ರಾಜಕೀಯ ಸ್ಥಿತಿ ಹಾಗೂ ನಾಯಕರ ಮನಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ರಾಜಕೀಯ ಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಹಿಮಾ ಜೆ. ಪಟೇಲ್

By

Published : Oct 6, 2019, 5:23 AM IST


ದಾವಣಗೆರೆ: ರಾಜಕೀಯದಲ್ಲಿ ಇರಬೇಕಾದರೆ ಜೈಲಿಗೆ ಹೋಗಿ ಬರಬೇಕು, ಕಳ್ಳತನ ಮಾಡಬೇಕು, ಕೆಟ್ಟ ಕೆಲಸ ಮಾಡಿ ಬಂದು ಮಾಧ್ಯಮದಲ್ಲಿ ಮಿಂಚಿದರೆ ರಾಜಕೀಯದಲ್ಲಿ ಇದ್ದಾರೆ ಎನ್ನುವ ಪರಿಸ್ಥಿತಿ ಎದುರಾಗಿದೆ ಎಂದು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಹೆಚ್ ಪಟೇಲ್ ಅವರ ಪುತ್ರ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ರಾಜಕೀಯ ಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಹಿಮಾ ಜೆ. ಪಟೇಲ್

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ 7ನೇ ದಿನದ ಶರವನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಅವರು 2020ನೇ ಸಾಲಿನ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ರಾಜಕಾರಣಿಗಳು ಪೇಪರ್ ಟಿವಿಗಳಲ್ಲಿ ಬಂದರೆ ಮಾತ್ರ ರಾಜಕಾರಣದಲ್ಲಿ ಇದ್ದಾರೆ ಎನ್ನುವ ಪರಿಕಲ್ಪನೆ ಬಂದಿದೆ. ನಿರಂತರ ಒತ್ತಡದಲ್ಲಿ ರಾಜಕಾರಣಿಗಳು ಕುಕ್ಕರ್​ನಲ್ಲಿ ಇದ್ದಂತೆ ಇರುತ್ತಾರೆ, ಏನಾದರು ಮಾಡಿ ಗೆಲ್ಲಬೇಕು, ಏನಾದರು ಮಾಡಿ ಅಧಿಕಾರ ಉಳಿಸಿಕೊಳ್ಳಬೇಕು ಎಂಬ ಆಸೆಯಲ್ಲಿ ಜನರ ಬಗ್ಗೆ ಚಿಂತನೆ ಮಾಡುವುದೇ ಹೊರಟು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೂರು ಸಾವಿರ ಮಠದ ಶ್ರೀಗಳ ನೇತೃತ್ವದಲ್ಲಿ ಜನಪರ ಕಾರ್ಯದ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದರು.

ABOUT THE AUTHOR

...view details