ದಾವಣಗೆರೆ: ತಮ್ಮ ಮಗಳಿಗಾಗಿ ಹೊಸ ಮನೆ ನಿರ್ಮಾಣ ಮಾಡಿದ ವ್ಯಕ್ತಿಯೊಬ್ಬರು 'ಶ್ರೀ ನರೇಂದ್ರ ಮೋದಿ ನಿಲಯ' ಎಂದು ಹೆಸರಿಟ್ಟಿದ್ದಾರೆ. ಚನ್ನಗಿರಿಯ ಗೌಡರ ಹಾಲೇಶ್ ಅವರು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ನೆಲೆಸಿರುವ ಪುತ್ರಿಗಾಗಿ ಮನೆ ಕಟ್ಟಿದ್ದಾರೆ.
ಚನ್ನಗಿರಿಯ ಕಗತೂರು ರಸ್ತೆಯಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಮನೆ ಮುಂದೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಾಕಿಸಿ ಅಭಿಮಾನ ಮೆರೆದಿದ್ದಾರೆ. ಹೊಸ ಮನೆ ಸಾರ್ವಜನಿಕರ ಆಕರ್ಷಣೆಯ ತಾಣವಾಗಿದೆ.