ದಾವಣಗೆರೆ :ಅವರದ್ದೊಂದು ಪುಟ್ಟ ಸಂಸಾರ. ಚಿಕ್ಕ ಮನೆ. ಅದರ ಹೆಸರು 'ದೇವರ ಮನೆ'. ನೆಮ್ಮದಿಯಿಂದ ಸಂಸಾರ ಸಾಗಿಸುತ್ತಿದ್ದ ಕುಟುಂಬ.. ಆದರೆ, ಅದೇನಾಯ್ತೋ ಗೊತ್ತಿಲ್ಲ. ಇಡೀ ಕುಟುಂಬವೇ ಇದೀಗ ನೇಣಿಗೆ ಶರಣಾಗಿದೆ.
ನಿನ್ನೆ ರಾತ್ರಿ ಅದೇನಾಗಿದೆಯೋ ಏನೋ ಇದೇ ಮನೆಯೊಳಗಿನ ಯಜಮಾನ, ಆತನ ಪತ್ನಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿದಾರೆ. ಇದನ್ನ ಕಂಡು ಸಂಬಂಧಿಕರಿಗೆ ತಡೆದುಕೊಳ್ಳಲಾಗ್ತಿಲ್ಲ. 46 ವರ್ಷದ ಕೃಷ್ಣನಾಯ್ಕ್, ಆತನ 35 ವರ್ಷದ ಹೆಂಡತಿ ಸರಸ್ವತಿ ಹಾಗೂ 7 ವರ್ಷದ ಮಗ ಧೃವ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂಬಂಧಿಕರ ಮನೆಯಲ್ಲಿದ್ದ ಮಗ ಧೃವನನ್ನ ಈ ದಂಪತಿ ಕರೆಯಿಸಿಕೊಂಡಿದೆ. ರಾತ್ರಿ 8.30ಕ್ಕೆ ಬಾಗಿಲು ಹಾಕಿಕೊಂಡವರು ಬೆಳಗ್ಗೆವರೆಗೂ ತೆಗೆದಿರಲಿಲ್ಲ. ಪಕ್ಕದ ಮನೆಯವರು ಅನುಮಾನಗೊಂಡು ಬಾಗಿಲು ಒಡೆದಿದ್ದಾರೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಮೃತನ ಮನೆಯ ಯಜಮಾನ ಕೃಷ್ಣ ನಾಯ್ಕ್ನ ಪತ್ನಿ ಸುಮಾ ಕಳೆದ ಒಂದು ವರ್ಷದಿಂದ ಪೈಲ್ಸ್ನಿಂದ ಬಳಲುತ್ತಿದ್ದಳು. ಆಸ್ಪತ್ರೆಗೆ ತೋರಿಸಿದ್ದರೂ ಹುಷಾರಾಗಿರಲಿಲ್ಲ. ಆಸ್ಪತ್ರೆಗೆ ಅಲೆದು ಅಲೆದು ಸುಸ್ತಾಗಿದ್ರು. ಜೊತೆಗೆ ಲಾರಿ ಚಾಲನೆ ಮಾಡುತ್ತಿದ್ದ ಕೃಷ್ಣನಾಯ್ಕ್ರನ್ನ ಕೆಲಸದಿಂದ ತೆಗೆಯಲಾಗಿತ್ತು.