ಕರ್ನಾಟಕ

karnataka

ETV Bharat / state

ದಾವಣಗೆರೆ SP ಹೆಸರಲ್ಲಿ ನಕಲಿ ಫೇಸ್​ಬುಕ್​ ಖಾತೆ ಸೃಷ್ಟಿಸಿದ ಖದೀಮರು! - fake facebook account

ದಾವಣಗೆರೆ ಎಸ್​ಪಿ ಹೆಸರಲ್ಲಿ ನಕಲಿ ಫೇಸ್​ಬುಕ್​ ಖಾತೆ ಸೃಷ್ಟಿಸಿ ವಂಚಕರು ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ನಡೆದಿದೆ.

Davangere Sp
ಎಸ್​​ಪಿ ಹೆಸರಲ್ಲಿ ನಕಲಿ ಫೇಸ್​ಬುಕ್​ ಖಾತೆ

By

Published : Jul 3, 2021, 11:49 AM IST

ದಾವಣಗೆರೆ: ಫೇಸ್​ಬುಕ್​ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕಾಗಿ ಖದೀಮರು ಬೇಡಿಕೆ ಇಡುತ್ತಿರುವ ಪ್ರಕರಣಗಳು ರಾಜ್ಯಾದ್ಯಂತ ಮರುಕಳಿಸುತ್ತಿವೆ. ಇಂತಹ ಪ್ರಕರಣಗಳಲ್ಲಿ ಸಾಕಷ್ಟು ಜನ ಕೂಡ ಆನ್​ಲೈನ್​ ಮೂಲಕ ಹಣ ನೀಡಿ ಮೋಸ ಹೋಗಿದ್ದಾರೆ. ಇದೀಗ ಪೊಲೀಸರ ಹೆಸರಲ್ಲೇ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಎಸ್​​ಪಿ ಹೆಸರಲ್ಲಿ ನಕಲಿ ಫೇಸ್​ಬುಕ್​ ಖಾತೆ

'ಎಸ್​ಪಿ ದಾವಣಗೆರೆ' ಎಂಬ ಹೆಸರಿನಲ್ಲಿ ನಕಲಿ ಅಕೌಂಟ್ ಖಾತೆ ಮಾಡಿ ವಂಚನೆ‌ಗೆ ಖದೀಮರು ಮುಂದಾಗಿದ್ದು, ಯಾರು ಕೂಡ ಮೋಸಕ್ಕೆ ಓಳಗಾಗಬೇಡಿ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಿಷ್ಯಂತ್ ಮನವಿ ಮಾಡಿದ್ದಾರೆ. ದುಷ್ಟರು ನಕಲಿ ಖಾತೆ ಕ್ರಿಯೇಟ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ನಕಲಿ ಖಾತೆಯಲ್ಲಿ ಯಾರೇ ಸಹಾಯ ಕೇಳಿದರೂ ಹಣ ನೀಡದಂತೆ ಎಸ್​ಪಿ ತಿಳಿಸಿದ್ದಾರೆ.

ಎಸ್​​ಪಿ ಹೆಸರಲ್ಲಿ ನಕಲಿ ಫೇಸ್​ಬುಕ್​ ಖಾತೆ

ಈ ಮೊದಲು ಜಿಲ್ಲೆಯ ಎಸ್​ಪಿ ಆಗಿದ್ದ ಹನುಮಂತರಾಯ ಅವರ ಹೆಸರಿನಲ್ಲಿ ಸಹ ಫೇಕ್​ ಅಕೌಂಟ್​ ಕ್ರಿಯೇಟ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣ ನಡೆದಿತ್ತು. ಇದೀಗ ಜಿಲ್ಲೆಯ ನೂತನ ಎಸ್​ಪಿ ರಿಷ್ಯಂತ್ ರವರ ಹೆಸರಿನಲ್ಲಿ ಸಹ ನಕಲಿ ಖಾತೆ ಸೃಷ್ಟಿಸಿದ್ದಾರೆ. ಇನ್ನಾದರೂ ದಾವಣಗೆರೆ ಜಿಲ್ಲಾ ಪೊಲೀಸರು ಇಂತಹ ಖದೀಮರನ್ನು ಮಟ್ಟಹಾಕಬೇಕಿದೆ.

ABOUT THE AUTHOR

...view details