ದಾವಣಗೆರೆ: ದಿ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇಹಲೋಕ ತ್ಯಜಿಸಿದಾಗ ಅವರ ನೇತ್ರದಾನ ಮಾಡಲಾಗಿತ್ತು. ಇದು ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದು, ಆ ಸಂದರ್ಭ ಅವರ ಸಾವಿರಾರು ಅಭಿಮಾನಿಗಳು ಕೂಡ ನೇತ್ರದಾನ ಮಾಡಲು ನೋಂದಣಿ ಮಾಡಿಸಿದ್ದರು. ದಾವಣಗೆರೆಯ ನಿವಾಸಿಯಾಗಿದ್ದ ಅಪ್ಪು ಅವರ ಅಪ್ಪಟ ಅಭಿಮಾನಿ ಈಗ ಹೇಳಿದಂತೆ ನಡೆದುಕೊಂಡಿದ್ದಾರೆ. ಅಪ್ಪುವಿನಂತೆ ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ್ದ ರವಿ.. ದಾವಣಗೆರೆಯ ಎಸ್.ಎಂ ಕೃಷ್ಣ ನಗರದ ನಿವಾಸಿ ರವಿ ಅವರು ಮಾರ್ಕೆಟ್ ರವಿ ಎಂದೇ ಚಿರಪರಿಚಿತವಾಗಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿ ಕೂಡ ಹೌದು. ಅಪ್ಪು ಇಹಲೋಕ ತ್ಯಜಿಸಿದ ವೇಳೆ ರವಿ (31) ಅತ್ಮಹತ್ಯೆಗೆ ಯತ್ನಿಸಿದ್ದರು. ಅದ್ರೆ ಕೆಲ ಮುಖಂಡರು ಬುದ್ಧಿವಾದ ಹೇಳಿ ರಕ್ಷಿಸಿದ್ದರು. ಅದರೆ ರವಿ ಇದೀಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.