ಕರ್ನಾಟಕ

karnataka

ETV Bharat / state

ದಾವಣಗೆರೆ: ಗೋಡೌನ್​ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕ ವಶ - Davanagere latest news

ತಾಲೂಕಿನ ಕಾಡಜ್ಜಿ ಗ್ರಾಮದ ಶ್ರೀ ದುರ್ಗಾದೇವಿ ಎಕ್ಸ್‌ಪ್ಲೋಸಿವ್ ಮ್ಯಾಗ್‌ಜಿನ್‌ನ ಬಳಿ ಇರುವ ಗೋಡೌನ್‌ನಲ್ಲಿ ಆಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಟೋಟಕಗಳನ್ನು ಬೊಲೆರೋ ವಾಹನ ಮೂಲಕ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Explosive seiz in Godan
ಸ್ಪೋಟಕ ವಶ

By

Published : Mar 22, 2021, 1:44 PM IST

ದಾವಣಗೆರೆ:ಗೋಡೌನ್‌ನಲ್ಲಿ ಆಕ್ರಮವಾಗಿ ಸಂಗ್ರಹಿಸಲಾಗಿದ್ದ ಸ್ಫೋಟಕ ವಸ್ತುಗಳನ್ನು ಹಾಗೂ ಮ್ಯಾಗ್‌ಜಿನ್​ಗಳನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಆ್ಯಂಟಿ ಸಬೋಟೇಜ್ ಚೆಕ್ ಟೀಮ್ (ASC) (ದುಷ್ಕೃತ್ಯ ನಿಗ್ರಹ ದಳ) ಮತ್ತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ 3,62,000 ರೂಪಾಯಿ ಬೆಲೆ ಬಾಳುವ ಸ್ಪೋಟಕವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ತಾಲೂಕಿನ ಕಾಡಜ್ಜಿ ಗ್ರಾಮದ ಸರ್ವೆ ನಂಬರ್ 54/IP, 53/4 ರಲ್ಲಿರುವ ಷಣ್ಮುಖಪ್ಪ ಎಂಬುವರಿಗೆ ಸೇರಿದ ಶ್ರೀ ದುರ್ಗಾದೇವಿ ಎಕ್ಸ್‌ಪ್ಲೋಸಿವ್ ಮ್ಯಾಗ್‌ಜಿನ್‌ನ ಬಳಿ ಇರುವ ಗೋಡೌನ್‌ನಲ್ಲಿ ಆಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಟೋಟಕಗಳನ್ನು ಬೊಲೆರೋ ವಾಹನ ಮೂಲಕ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಐಡಿಯಕ್ ಪವರ್-90 ಎಕ್ಸಪ್ಲೋಸಿವ್ 10,000 ಜಿಲೆಟಿನ್ ಕಡ್ಡಿಗಳು, ಅಲ್ಯೂಮಿನಿಯಂ ಎಲೆಕ್ಟ್ರಿಕಲ್ 7400, ಆಪೀಟಿಕ್ಸ್ 50 ಕೆಜಿಯ ಐದು ಚೀಲಗಳು ಮತ್ತು ಬೊಲೆರೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಆರೋಪಿಗಳಾದ ಬಿ.ಎಸ್. ವಿಕ್ರಮ್, ನಾಗರಾಜ್, ಕೆ. ವಿಜಯಕುಮಾರ್‌, ಮಂಜುನಾಥ ಇವರನ್ನು ಬಂಧಿಸಿದ್ದು, ಮಾಡಿದ್ದು, ಗೋಡೌನ್ ಮಾಲೀಕ ಷಣ್ಮುಖಪ್ಪ ವಿರುದ್ಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details