ದಾವಣಗೆರೆ: ಅವಧಿ ಮೀರಿದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ನಾಶಪಡಿಸಿದರು. ದಾವಣಗೆರೆ ಅಬಕಾರಿ ಆಯುಕ್ತ ಶಿವಪ್ರಸಾದ್, ಡಿವೈಎಸ್ಪಿ ನಾಗರಾಜ್ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿ ಮದ್ಯವನ್ನು ನೆಲಕ್ಕೆ ಸುರಿಯುವ ಮೂಲಕ ನಾಶ ಪಡಿಸಿದ್ದಾರೆ.
ಪ್ರತಿಬಾರಿಯಂತೆ ಈ ಬಾರಿಯು ಸಾಕಷ್ಟು ಮದ್ಯ ಹಾಗೂ ಬಿಯರ್ ಬಾಟಲ್ಗಳು ಮಾರಾಟವಾಗದೆ ಅವಧಿ ಮುಗಿದಿದ್ದರಿಂದ ಅದನ್ನು ಲಿಕ್ಕರ್ ಡಿಪೋ ಗೋಡೌನ್ನಲ್ಲಿರಿಸಲಾಗಿತ್ತು. ಡಿಪೋದ ಆವರಣದಲ್ಲಿ ಒಟ್ಟು 9.30 ಲಕ್ಷ ರೂಪಾಯಿ ಮೌಲ್ಯದ 31 ಬಾಟಲ್ ಮದ್ಯ, 45,64,390 ಲೀಟರ್ ಬಿಯರ್ ನಾಶಪಡಿಸಲಾಗಿದೆ.
ಅವಧಿ ಮುಗಿದಿದ್ದ ಲಕ್ಷಾಂತರ ಮೌಲ್ಯದ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ ಗಾಂಜಾ ಮಾರಾಟ ಮಾಡುತ್ತಿದ್ದ 7 ಆರೋಪಿಗಳ ಬಂಧನ
ಅಕ್ರಮವಾಗಿ ಗಾಂಜಾ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ವಿದ್ಯಾನಗರ ಹಾಗೂ ದಕ್ಷಿಣ ವೃತ್ತದ ಪೊಲೀಸರು ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಈ ಜಾಲ ಬಯಲಿಗೆ ಬಂದಿದೆ.
ದಾವಣಗೆರೆ ನಗರದ ಕುಂದುವಾಡ ರಸ್ತೆ, ಬಸವೇಶ್ವರ ಬಡಾವಣೆಯ ರೂಂ ಒಂದರಲ್ಲಿ ದಾಸ್ತಾನು ಮಾಡಿ ಮಾರಾಟ ಮಾಡಲು ಹಾಗೂ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದರೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿ ದಾಳಿ ಮಾಡಿದ್ದಾರೆ.
ಗಾಂಜಾ ವಶಪಡಿಸಿಕೊಂಡ ಪೊಲೀಸರು ಈ ವೇಳೆ 70 ಸಾವಿರ ರೂ. ಮೌಲ್ಯದ 4,522 ಗ್ರಾಂ ಗಾಂಜಾ, 2,780 ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದು, ದಾವಣಗೆರೆ ನಿವಾಸಿಗಳಾದ ಚಂದ್ರಶೇಖರ, ತಾರೀಕ್, ಸತೀಶ ಕುಮಾರ್, ಹಾವೇರಿಯ ಗುರುದತ್ತ, ರಾಯಚೂರು ಜಿಲ್ಲೆಯ ಶಿವಕುಮಾರ, ಅರ್ಜುನ್ ನಾಯಕ್ ಹಾಗೂ ಸಿಂಧನೂರು ತಾಲೂಕಿನ ಶಿವಕುಮಾರ ಗಾಯನ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಬೆಣ್ಣೆನಗರಿಯಲ್ಲಿ ಎಸಿಬಿ ದಾಳಿ: ಉಪ ನಿರ್ದೇಶಕ ಕೆ.ಎಂ. ಪ್ರಥಮ್ ನಿವಾಸಗಳ ತಲಾಶ್