ಕರ್ನಾಟಕ

karnataka

ETV Bharat / state

'ಸಿಡಿ ತಗೊಂಡು ನಾನೇನ್ ಮಾಡ್ಲಿ, ನನಗೆ ವಯಸ್ಸಾಗಿದೆ ನಡೀರಿ' - ಸಿಡಿ ವಿವಾದದ ಬಗ್ಗೆ ಶಾಮನೂರು ಶಿವಶಂಕರಪ್ಪ ಹೇಳಿಕೆ

ರಮೇಶ್ ಜಾರಕಿಹೊಳಿ ಸಿಡಿ ವಿವಾದದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವ್ಯಂಗ್ಯವಾಗಿ ಉತ್ತರಿಸಿದರು.

EX Minister Shamanoor Sivasankarappa reaction about CD issue
ಸಿಡಿ ವಿವಾದದ ಬಗ್ಗೆ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ

By

Published : Mar 26, 2021, 3:07 PM IST

ದಾವಣಗೆರೆ : ಸಿಡಿ ತಗೊಂಡು ನಾನೇನ್ ಮಾಡ್ಲಿ, ನನಗೆ ವಯಸ್ಸಾಗಿದೆ ನಡೀರಿ ಎಂದು, ರಮೇಶ್ ಜಾರಕಿಹೊಳಿ ಸಿಡಿ ವಿವಾದದ ಬಗ್ಗೆ ಮಾಧ್ಯಮವರು ಕೇಳಿದ ಪ್ರಶ್ನೆಗೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದರು.

ದಾವಣಗೆರೆ ಪಾಲಿಕೆಯ 20 ನೇ ವಾರ್ಡ್ ಉಪಚುನಾವಣೆ ಪ್ರಚಾರಕ್ಕೂ ಮುನ್ನ ಮಾತನಾಡಿದ‌ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಪ್ರತಿಕ್ರಿಯಿಸುವುದಿಲ್ಲ. ನನಗೆ ವಯಸ್ಸಾಗಿದೆ, ಸಿಡಿ ತಗೊಂಡು ನಾನೇನ್ ಮಾಡ್ಲಿ ಎಂದು ನಗೆ ಚಟಾಕಿ ಹಾರಿಸಿದರು.

ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ

ಓದಿ : ಇನ್ನೂ ಹತ್ತು ವಿಡಿಯೋ ಬಿಟ್ಟರೂ ಹೆದರಲ್ಲ, ನಮಗೂ ವಕೀಲರಿದ್ದಾರೆ; ರಮೇಶ ಜಾರಕಿಹೊಳಿ

20 ಮತ್ತು 22 ನೇ ವಾರ್ಡ್​ನ‌ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ. ಜನ ನಮ್ಮ ಕಡೆ ಇದ್ದಾರೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details