ಕರ್ನಾಟಕ

karnataka

ETV Bharat / state

ಈಟಿವಿ ಭಾರತ ಇಂಪ್ಯಾಕ್ಟ್​​​​: ಯಮಕಂಟಕವಾಗಿದ್ದ ಯುಜಿಡಿ ಬಾಕ್ಸ್​​​​ ಮರು ನಿರ್ಮಾಣಕ್ಕೆ ಚಾಲನೆ - undefined

ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಗೊಂಡ ಬಳಿಕ ಆಮೆಗತಿಯಲ್ಲಿ ಕೆಲಸ ಸಾಗುತ್ತಿದೆ. ಇನ್ನು ಇತ್ತ ಹಲವೆಡೆ ಯುಜಿಡಿ ಬಾಕ್ಸ್ ಬಿದ್ದಿದ್ದರೂ ಪಾಲಿಕೆ ತಲೆಕೆಡಿಸಿಕೊಂಡಿರಲಿಲ್ಲ. ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದರು. ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ‌ ನಿರ್ಮಾಣವಾಗಿತ್ತು.

ಈಟಿವಿ ಭಾರತ್​ ಇಂಪ್ಯಾಕ್ಟ್

By

Published : Jul 2, 2019, 8:22 PM IST

ದಾವಣಗೆರೆ: ಒಳಚರಂಡಿಗಳು ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಳವಾಗಿದ್ದು, ಹಲವೆಡೆ ಯುಜಿಡಿ ಬಾಕ್ಸ್ ಬೀಳುವ ಹಂತದಲ್ಲಿದ್ದವು. ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿತ್ತು. ಈ ಸಮಸ್ಯೆ ಕುರಿತು ಈಟಿವಿ ಭಾರತ ಜೂನ್ 14ರಂದು ವರದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ದಾವಣಗೆರೆ ಮಹಾನಗರ ಪಾಲಿಕೆ ಬೀಳುವ ಹಂತದಲ್ಲಿದ್ದ ಯುಜಿಡಿ ಬಾಕ್ಸ್​​ಗಳ ಮರು ನಿರ್ಮಾಣಕ್ಕೆ ಚಾಲನೆ ನೀಡಿದೆ.

ಸ್ಮಾರ್ಟ್​ ದಾವಣಗೆರೆಯಲ್ಲಿ ಬೀಳುವ ಹಂತದಲ್ಲಿವೆ ಹಲವು ಯುಜಿಡಿ ಬಾಕ್ಸ್​​​​ಗಳು!

ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಗೊಂಡ ಬಳಿಕ ಆಮೆಗತಿಯಲ್ಲಿ ಕೆಲಸ ಸಾಗುತ್ತಿದೆ. ಇನ್ನು ಇತ್ತ ಹಲವೆಡೆ ಯುಜಿಡಿ ಬಾಕ್ಸ್ ಬಿದ್ದಿದ್ದರೂ ಪಾಲಿಕೆ ತಲೆಕೆಡಿಸಿಕೊಂಡಿರಲಿಲ್ಲ. ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದರು. ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ‌ ನಿರ್ಮಾಣವಾಗಿತ್ತು.

ನಗರದ ಹಳೆ ಕುಂದುವಾಡ, ವಿನೋಬನಗರ ಸೇರಿದಂತೆ ವಿವಿಧೆಡೆ ಯುಜಿಡಿ ಬಾಕ್ಸ್ ಬಿದ್ದು ಸುಮಾರು ತಿಂಗಳುಗಳೇ ಕಳೆದಿತ್ತು. ಇಬ್ಬರು ಈ ಯುಜಿಡಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಇನ್ನು ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲಿ ಈ ಯುಜಿಡಿಯಲ್ಲಿ ಬೀಳುತ್ತಾರೋ ಎಂಬ ಆತಂಕದಲ್ಲಿ ಪೋಷಕರಿದ್ದರು.

ಯುಜಿಡಿ ಬಾಕ್ಸ್​ ಮರು ನಿರ್ಮಾಣಕ್ಕೆ ಚಾಲನೆ

ಈಟಿವಿ ಭಾರತ ಕಾಳಜಿ

ಮಹಾನಗರ ಪಾಲಿಕೆಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿತ್ತು. ಈಟಿವಿ ಭಾರತ ಈ ಬಗ್ಗೆ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಮಹಾನಗರ ಪಾಲಿಕೆ 15 ದಿನದಲ್ಲೇ ಯುಜಿಡಿ ಬಾಕ್ಸ್ ಮರು‌ ನಿರ್ಮಾಣಕ್ಕೆ ಚಾಲನೆ ನೀಡಿದೆ.‌ ಪಾಲಿಕೆ ವ್ಯಾಪ್ತಿಯ ಹಳೆ ಕುಂದುವಾಡದ ಶುದ್ಧ ಕುಡಿಯುವ ನೀರಿನ ಘಟಕದ ಮುಂಭಾಗ ಹಾಗೂ ನಗರದ 2-3 ಕಡೆಗಳಲ್ಲಿ ಯುಜಿಡಿ ಬಾಕ್ಸ್ ಸರಿಪಡಿಸಿದೆ.

For All Latest Updates

TAGGED:

ABOUT THE AUTHOR

...view details