ದಾವಣಗೆರೆ:ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಮತಗಟ್ಟೆ ಸಂಖ್ಯೆ 6 ರಲ್ಲಿ ಬೆಳಗ್ಗೆ 7 ಗಂಟೆಯಿಂದ 8.15 ವರೆಗೆ ಇವಿಎಂ ಕೈಕೊಟ್ಟಿತ್ತು. ಈ ಕುರಿತು ಪ್ರಸಾರವಾಗಿದ್ದ ಈಟಿವಿ ಭಾರತ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಕೈಕೊಟ್ಟಿದ್ದ ಇವಿಎಂ: ಈಟಿವಿ ಭಾರತ ವರದಿ ಇಂಪ್ಯಾಕ್ಟ್ನಿಂದ 10 ನಿಮಿಷದಲ್ಲೇ ವೋಟಿಂಗ್ ಆರಂಭ - kannada newspaper
ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಕೈಕೊಟ್ಟಿದ್ದ ಮತಯಂತ್ರ- ಈಟಿವಿ ಭಾರತ ವರದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು- ಹತ್ತೇ ನಿಮಿಷಗಳಲ್ಲಿ ವೋಟಿಂಗ್ ಆರಂಭ.
ಇವಿಎಂ ದೋಷದ ಬಗ್ಗೆ ಈಟಿವಿ ಭಾರತ ವರದಿ ಪ್ರಸಾರ ಮಾಡುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ವರದಿ ಬಿತ್ತರವಾದ ಹತ್ತೇ ನಿಮಿಷಗಳಲ್ಲಿ ವೋಟಿಂಗ್ ಆರಂಭಿಸಿದ್ದಾರೆ. ಬೆಳಗ್ಗೆ 7 ಗಂಟೆಗೆ ಜನರು ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದ್ದರು. ಇವಿಎಂ ಕೆಟ್ಟು ನಿಂತಿದ್ದರಿಂದ ಕಾರಣಕ್ಕೆ ಒಂದು ಕಾಲು ಗಂಟೆ ಜನ ಮತ ಚಲಾಯಿಸಲು ಆರಿಲಿಲ್ಲ. ವರದಿ ಪ್ರಸಾರವಾದ 10 ನಿಮಿಷಗಳಲ್ಲೇ ಬೇರೊಂದು ಯಂತ್ರ ತರಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.
ಬೆಳಗ್ಗೆಯಿಂದಲೇ ಸಖಿ ಕೇಂದ್ರಕ್ಕೆ ಆಗಮಿಸಿದ್ದ ಜನರು ಮತ ಚಲಾಯಿಸಲು ಕಾದು ಕುಳಿತಿದ್ದರು. ಅರ್ಧ ಕಿಲೋಮೀಟರ್ಗೂ ಹೆಚ್ಚು ದೂರದಿಂದ ಬಂದಿದ್ದ ವೃದ್ಧ ದಂಪತಿ ಮತ ಚಲಾಯಿಸಿ ಸಂಭ್ರಮಿಸಿದರು. ಅಲ್ಲದೆ 'ಈಟಿವಿ ಭಾರತ'ಗೆ ಧನ್ಯವಾದ ತಿಳಿಸಿದರು.