ಕರ್ನಾಟಕ

karnataka

ETV Bharat / state

ಹರಿಹರದಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸ

ವಿಶ್ವದೆಲ್ಲೆಡೆ ಜೂನ್ 5 ರಂದು ಪ್ರತಿವರ್ಷ 'ವಿಶ್ವ ಪರಿಸರ ದಿನ' ಆಚರಿಸಿಕೊಂಡು ಬರಲಾಗುತ್ತಿದೆ. ಇದು ಕೇವಲ ಒಂದು ತಿಂಗಳಿಗೆ ಸೀಮಿತವಾಗಬಾರದು ಎಂದು ಹರಿಹರದಲ್ಲಿ ಉಜ್ಜೀವನ್​ ಬ್ಯಾಂಕ್​ ವ್ಯವಸ್ಥಾಪಕ ಮೊಯಿನುದ್ದೀನ್‌ ಹೇಳಿದ್ದಾರೆ.

ffdf
ಹರಿಹರದಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸ!

By

Published : Nov 27, 2019, 8:01 PM IST

ದಾವಣಗೆರೆ: ಮಾನವ ಪರಿಸರದ ಶಿಶು. ಪರಿಸರವಿಲ್ಲದೆ ಆತನ ಅಸ್ತಿತ್ವಕ್ಕೆ ಬೆಲೆಯಿರುವುದಿಲ್ಲ. ಆದ್ದರಿಂದಲೇ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ ಇದೆ ಎಂದು ಉಜ್ಜೀವನ್​ ಬ್ಯಾಂಕ್​ ವ್ಯವಸ್ಥಾಪಕ ಮೊಯಿನುದ್ದೀನ್‌ ಹರಿಹರದಲ್ಲಿ ಹೇಳಿದರು.

ನಗರದಲ್ಲಿ ಉಜ್ಜೀವನ್ ಬ್ಯಾಂಕ್​ನಿಂದ ಹಮ್ಮಿಕೊಂಡಿದ್ದ ನೆರೆಹೊರೆ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ದಿನಾಚರಣೆ ಕೇವಲ ಜೂನ್ ತಿಂಗಳಿಗೆ ಮಾತ್ರ ಸೀಮಿತರಾಗದೇ ಪ್ರತಿ ದಿನವೂ ಪರಿಸರ ದಿನವನ್ನಾಗಿ ಆಚರಿಸಬೇಕು. ನಾವು ನಮ್ಮ ಪರಿಸರದ ಬಗ್ಗೆ ತಿಳಿಯುವ ಹಾಗು ಅದರ ಮಹತ್ವವನ್ನು ಅರಿಯುವ ಹಾಗೂ ಇಂದು ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾಗಿದೆ ಎಂದು ಕರೆ ಕೊಟ್ಟರು.

ಹರಿಹರದಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸ!

ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ವಚ್ಛ ಪರಿಸರದ ಅಗತ್ಯತೆಯನ್ನು ಅರಿಯುವುದು ಹಾಗೂ ಜನರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಬೇಕು ಎಂದು ಮೊಯಿನುದ್ದೀನ್‌ ಹೇಳಿದ್ರು. ಇನ್ನು ವಿವಿಧ ಶಾಲಾ ಮಕ್ಕಳಿಂದ ನಗರದಲ್ಲಿ ಮೆರವಣಿಗೆ ನಡೆಸಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಯಿತು. ಈ ವೇಳೆ ಹರಿಹರದ ಪ್ರಮುಖ ನಾಯಕರು ಮುಖಂಡರು ಹಾಜರಿದ್ದರು.

ABOUT THE AUTHOR

...view details