ಕರ್ನಾಟಕ

karnataka

ETV Bharat / state

ಸ್ಮಾರ್ಟ್​ ಸಿಟಿಗೆ ಸ್ಮಾರ್ಟ್​ ಜನಪ್ರತಿನಿಧಿ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಹೀಗೊಂದು ಪ್ರಚಾರ - ದಾವಣಗೆರೆ ಪಾಲಿಕೆ ಚುನಾವಣೆ ನ್ಯೂಸ್

ದಾವಣಗೆರೆ ಪಾಲಿಕೆಯ 24ನೇ ವಾರ್ಡ್​ನಿಂದ ಚುನಾವಣೆಗೆ ಸ್ಪರ್ಧಿಸಿರುವ ಎಂಜಿನಿಯರಿಂಗ್ ಪದವಿಧರನನ್ನ ಗೆಲ್ಲಿಸಿ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿ ಬಳಗ ಮನವಿ ಮಾಡಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸುದ್ದಿಗೋಷ್ಠಿ

By

Published : Nov 6, 2019, 9:24 PM IST

ದಾವಣಗೆರೆ:ಸ್ಮಾರ್ಟ್ ಸಿಟಿಯಾಗಿರುವ ದಾವಣಗೆರೆಗೆ ಸ್ಮಾರ್ಟ್ ಜನಪ್ರತಿನಿಧಿಗಳ ಅವಶ್ಯಕತೆ ಇದೆ. ಹೀಗಾಗಿ ಎಂಜಿನಿಯರಿಂಗ್ ಪದವಿ ಪಡೆದು ಹಲವು ಸಮಾಜ ಸೇವೆಗಳಲ್ಲಿ ಗುರುತಿಸಿಕೊಂಡಿರುವ 24 ನೇ ವಾರ್ಡ್​ನ ಬಿಜೆಪಿ ಅಭ್ಯರ್ಥಿ ಪ್ರಸನ್ನ ಕುಮಾರ್ ಅವರನ್ನು ಗೆಲ್ಲಿಸಬೇಕು ಎಂದು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮುಖಂಡ ಪವನ್ ಮನವಿ ಮಾಡಿದ್ದಾರೆ.

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸುದ್ದಿಗೋಷ್ಟಿ

ಈ ಕುರಿತು ದಾವಣಗೆರೆ ಪ್ರೆಸ್ ಕ್ಲಬ್​ನಲ್ಲಿ ಸುದ್ದಿಗೋಷ್ಟಿ ನಡೆಸಿದ ವಿದ್ಯಾರ್ಥಿ ಮುಖಂಡ ಪವನ್, ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ಕೆಲಸಗಳು ನಡೆಯುತ್ತಿವೆ. ಕೆಲವೆಡೆ ಅವೈಜ್ಞಾನಿಕವಾಗಿ, ಇನ್ನೂ ಕೆಲವೆಡೆ ಕಳಪೆ ಕಾಮಗಾರಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗೆ ಉತ್ತಮ ಅಭ್ಯರ್ಥಿಗಳು ಆಯ್ಕೆಯಾಗಬೇಕಿದೆ ಎಂದರು.

ಇನ್ನು, 24ನೇ ವಾರ್ಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಪ್ರಸನ್ನ ಕುಮಾರ್ ಸ್ಪರ್ಧಿಸಿದ್ದು, ಇವರು ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಹಲವು ಹೋರಾಟಗಳಲ್ಲಿ ಮುಂಚೂಣಿ ನಾಯಕತ್ವ ವಹಿಸಿದವರು. ನಿಸ್ವಾರ್ಥ ಸೇವೆಯಿಂದ ಗುರುತಿಸಿಕೊಂಡವರು. ಈ ರೀತಿ ನಾಯಕ ಸಿಗುವುದು ವಿರಳ. ಹಲವು ಕನಸುಗಳನ್ನು ಹೊತ್ತು ತಂದಿರುವ ಪ್ರಸನ್ನ ಅವರು ಯೋಗ್ಯ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಅವರಿಗೆ ಮತ ನೀಡುವ ಮೂಲಕ ದಾವಣಗೆರೆ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಪವನ ಮನವಿ ಮಾಡಿದರು.

ABOUT THE AUTHOR

...view details