ಕರ್ನಾಟಕ

karnataka

ETV Bharat / state

ಆಲೂರು ಗ್ರಾಮದ ಕಲ್ಲು ಕ್ವಾರಿಯಲ್ಲಿ ಡಿಟೋನೇಟರ್ ಪತ್ತೆ: ಪ್ರಕರಣ ದಾಖಲು - ದಾವಣಗೆರೆ ತಾಲೂಕಿನ ಆಲೂರು ಗ್ರಾಮ

ದಾವಣಗೆರೆ ತಾಲೂಕಿನ ಆಲೂರು ಗ್ರಾಮದ ಸರ್ವೆ ನಂ. 68/9ರಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿಗೆ ಭೇಟಿ ನೀಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಒಂದು ಜೀವಂತ ಎಲೆಕ್ಟ್ರಿಕಲ್ ಡಿಟೋನೇಟರ್ ವಶಕ್ಕೆ ಪಡೆದಿದ್ದಾರೆ.

Electrical Detonator detection in alur  village
ಆಲೂರು ಗ್ರಾಮದ ಕಲ್ಲು ಕ್ವಾರಿ ಪರಿಶೀಲನೆ ನಡೆಸಿದ ಅಧಿಕಾರಿಗಳು

By

Published : Feb 25, 2021, 7:13 AM IST

ದಾವಣಗೆರೆ: ತಾಲೂಕಿನ ಆಲೂರು ಗ್ರಾಮದಲ್ಲಿ ಕಲ್ಲು ಕ್ವಾರಿ ನಡೆಸುತ್ತಿದ್ದ ಸ್ಥಳ ಪರಿಶೀಲನೆ ವೇಳೆ ಒಂದು ಜೀವಂತ ಎಲೆಕ್ಟ್ರಿಕಲ್ ಡಿಟೋನೇಟರ್ ಪತ್ತೆಯಾಗಿದೆ.

ಶಿವಮೊಗ್ಗ ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲೆಟಿನ್​ ಸ್ಫೋಟಗೊಂಡು ಅಮಾಯಕ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ದಾವಣಗೆರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಆಲೂರು ಗ್ರಾಮದ ಸರ್ವೆ ನಂ. 68/9ರಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಓದಿ:ಕೊನೆ ಕ್ಷಣದಲ್ಲಿ ಶಾಸಕ ಶರತ್ ಬಚ್ಚೇಗೌಡ ಜಾಣ ನಡೆ: ಕಾಂಗ್ರೆಸ್​ಗೆ ಬಾಹ್ಯ ಬೆಂಬಲ ನೀಡಲು ನಿರ್ಧಾರ!

ಈ ವೇಳೆ ಒಂದು ಜೀವಂತ ಎಲೆಕ್ಟ್ರಿಕಲ್ ಡಿಟೋನೇಟರ್ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ಜೊತೆಗೆ ಆಲೂರುಹಟ್ಟಿ ಗ್ರಾಮದ ಕಲ್ಲುಕ್ವಾರಿ ಮಾಲೀಕ ಕುಮಾರನಾಯ್ಕ ಎಂಬುವರ ವಿರುದ್ಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details