ದಾವಣಗೆರೆ: ಚಾರ್ಜಿಂಗ್ ಇಟ್ಟಿದ್ದ ಎಲೆಕ್ಟ್ರಿಕ್ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ನಡೆದಿದೆ. ಇದ್ದಕ್ಕಿದ್ದಂತೆ ಎಲೆಕ್ರ್ಟಿಕ್ ಬೈಕ್ನ ಬ್ಯಾಟರಿ ಸ್ಫೋಟಗೊಂಡಿದ್ದು, ಬೈಕ್ ಬೆಂಕಿಗೆ ಆಹುತಿಯಾಗಿದೆ.
ಚಾರ್ಜಿಂಗ್ ವೇಳೆ ಬ್ಯಾಟರಿ ಸ್ಫೋಟಗೊಂಡು ಬೆಂಕಿಗಾಹುತಿಯಾದ ಎಲೆಕ್ಟ್ರಿಕ್ ಬೈಕ್ - ಈಟಿವಿ ಭಾರತ ಕನ್ನಡ
ಮನೆಯ ಮುಂಭಾಗ ಚಾರ್ಜಿಂಗ್ಗೆ ಇರಿಸಿದ್ದ ಎಲೆಕ್ರ್ಟಿಕ್ ಬೈಕ್ನ ಬ್ಯಾಟರಿ ಸ್ಫೋಟಗೊಂಡು ಬೈಕ್ ಬೆಂಕಿಗಾಹುತಿ ಆಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಚಾರ್ಜಿಂಗ್ ವೇಳೆ ಬ್ಯಾಟರಿ ಸ್ಫೋಟಗೊಂಡು ಬೆಂಕಿಗಾಹುತಿಯಾದ ಎಲೆಕ್ಟ್ರಿಕ್ ಬೈಕ್
ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದ ನಿವಾಸಿ ಜಯಪ್ಪ ಎಂಬುವವರು 10 ತಿಂಗಳ ಹಿಂದೆ ಬ್ಯಾಟರಿ ಚಾಲಿತ ಬೈಕ್ ಖರೀದಿಸಿದ್ದರು. ಇವರು ಮನೆ ಮುಂಭಾಗ ಬೈಕ್ ಅನ್ನು ಚಾರ್ಜಿಂಗ್ಗೆ ಇರಿಸಿದ್ದಾಗ ಅವಘಡ ಸಂಭವಿಸಿದೆ. ಬಸವಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ :ರಾಯಚೂರು: ನಡು ರಸ್ತೆ ಮೇಲೆ ಧಗಧಗನೆ ಹೊತ್ತಿ ಉರಿದ ಕಾರು
Last Updated : Nov 30, 2022, 3:55 PM IST