ಕರ್ನಾಟಕ

karnataka

ETV Bharat / state

ಗ್ರಹಣದ ಸಮಯದಲ್ಲಿ ಉಪಹಾರ ಸೇವನೆ: ಮಿರ್ಚಿ ಮಂಡಕ್ಕಿ ಸವಿದ ಪ್ರಗತಿಪರರು - Eating breakfast during an eclipse in davanagere

ಮೂಢನಂಬಿಕೆಗೆ ಸೆಡ್ಡು ಹೊಡೆದು ಪ್ರಗತಿಪರರು ಗ್ರಹಣದ ಸಮಯದಲ್ಲಿ ಉಪಹಾರ ಸೇವನೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಗ್ರಹಣದ ಸಮಯದಲ್ಲಿ ಉಪಹಾರ ಸೇವನೆ
ಗ್ರಹಣದ ಸಮಯದಲ್ಲಿ ಉಪಹಾರ ಸೇವನೆ

By

Published : Nov 8, 2022, 7:36 PM IST

Updated : Nov 8, 2022, 7:47 PM IST

ದಾವಣಗೆರೆ: ಗ್ರಹಣದ ವೇಳೆ ಊಟ, ತಿಂಡಿ ಸೇವನೆ ಹಾಗೂ ಅಡುಗೆ ಮಾಡಿದ್ರೆ, ಒಳ್ಳೆಯದಾಗಲ್ಲ ಎಂಬ ನಂಬಿಕೆಯಲ್ಲಿ ಜನ ಬದುಕುತ್ತಿದ್ದಾರೆ. ಆದ್ರೆ ಇದಕ್ಕೆ ಅಪವಾದ ಎಂಬಂತೆ ಬೆಣ್ಣೆ ನಗರಿಯಲ್ಲಿ ಪ್ರಗತಿಪರರು ಮಿರ್ಚಿ, ಮಂಡಕ್ಕಿ ಸೇವಿಸುವ ಮೂಲಕ ಮೂಢನಂಬಿಕೆಯನ್ನು ತೊಡೆದು ಹಾಕುವಂತೆ ಜನರಲ್ಲಿ ಸಂದೇಶ ರವಾನೆ ಮಾಡಿದರು.

ಗ್ರಹಣದ ಸಮಯದಲ್ಲಿ ಉಪಹಾರ ಸೇವನೆ

ಈ ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಸಂಜೆ ವೇಳೆಗೆ ಜಮಾಯಿಸಿದ ಪ್ರಗತಿಪರರು ಖಂಡಗ್ರಸ್ತ ಚಂದ್ರಗ್ರಹಣ ಹಿನ್ನೆಲೆ ಮಂಡಕ್ಕಿ ಮಿರ್ಚಿ ಹಾಗೂ ಟೀ ಸೇವಿಸಿದ್ರು. ಮೂಢನಂಬಿಕೆ ವಿರೋಧಿಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ಪ್ರಗತಿಪರರು ಈ ಮೂಢನಂಬಿಕೆಯಿಂದ ಜನರು ದೂರ ಉಳಿಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ:ಭಯೋತ್ಪಾದಕ ಜ್ಯೋತಿಷಿಗಳಿಂದ ಎಚ್ಚರಿಕೆಯಿಂದಿರಿ: ಚಂದ್ರ ಗ್ರಹಣದ ಬಗ್ಗೆ ಹುಲಿಕಲ್ ನಟರಾಜ್

Last Updated : Nov 8, 2022, 7:47 PM IST

ABOUT THE AUTHOR

...view details