ದಾವಣಗೆರೆ: ಮಹಾನಗರ ಪಾಲಿಕೆಯ 16ನೇ ವಾರ್ಡ್ಗೆ ನಡೆದ ಚುನಾವಣೆಯಲ್ಲಿ ಅನೈತಿಕವಾಗಿ ಕಾಂಗ್ರೆಸ್ ಅಭ್ಯರ್ಥಿ ಜಯ ಗಳಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಕಾನೂನು ವಿಭಾಗದ ಜಿಲ್ಲಾ ಘಟಕ, ಬೂತ್ ಮಟ್ಟದ ಅಧಿಕಾರಿಗಳ ಕರ್ತವ್ಯ ಲೋಪದಿಂದಲೇ ಅಕ್ರಮ ನಡೆದಿದೆ ಎಂದು ದೂರಿದೆ.
ದಾವಣಗೆರೆ ಪಾಲಿಕೆ ಚುನಾವಣೆಯಲ್ಲಿ ನಕಲಿ ಮತದಾನ: ಎ.ಸಿ.ರಾಘವೇಂದ್ರ ಆರೋಪ - ಬಿಜೆಪಿ ಜಿಲ್ಲಾ ಕಾನೂನು ಘಟಕದ ಸಂಚಾಲಕ ಎ. ಸಿ. ರಾಘವೇಂದ್ರ
ದಾವಣಗೆರೆ ಮಹಾನಗರ ಪಾಲಿಕೆಯ 16ನೇ ವಾರ್ಡ್ಗೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಜಿಲ್ಲಾ ಕಾನೂನು ಘಟಕದ ಸಂಚಾಲಕ ಎ.ಸಿ.ರಾಘವೇಂದ್ರ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಕಾನೂನು ಘಟಕದ ಸಂಚಾಲಕ ಎ.ಸಿ.ರಾಘವೇಂದ್ರ, ವಾರ್ಡ್ನಲ್ಲಿ ವಾಸ ಮಾಡದೇ ಬೇರೆ ಕಡೆ ನೆಲೆಸಿರುವವರನ್ನು ಕರೆ ತಂದು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿಸಲಾಗಿದೆ. ಮನೆ ಇಲ್ಲದಿದ್ದರೂ, ವಾಸ ಮಾಡದಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಬಂದಿದ್ದಾದರೂ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಒಟ್ಟು 10 ಬೂತ್ಗಳಲ್ಲಿ 2500 ನಕಲಿ ಮತದಾರರಿದ್ದಾರೆ. ವಿನೋಬ ನಗರದಲ್ಲಿ ಹಾಲಿ ವಾಸ ಮಾಡುತ್ತಿರುವ ನಾಗರಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನ ಪಟ್ಟರೂ ಸಹ ಬಿಎಲ್ಒ ಅಧಿಕಾರಿಗಳ ಕರ್ತವ್ಯ ಲೋಪದಿಂದ ಸಾಧ್ಯವಾಗಿಲ್ಲ. ಇದರಲ್ಲಿ ಪಾಲಿಕೆಯ ಡಾಟಾ ಎಂಟ್ರಿ ಮಾಡುವ ಸಿಬ್ಬಂದಿ ಶಾಮೀಲಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಈ ಬಗ್ಗೆ ದಾಖಲೆ ಸಮೇತ ಡಿಸಿ ಮಹಾಂತೇಶ್ ಬಿಳಗಿ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದರು.