ಕರ್ನಾಟಕ

karnataka

ETV Bharat / state

ಗುಡ್ಡಕ್ಕೆ ಹೊತ್ತಿದ ಬೆಂಕಿಯಲ್ಲಿ ರೈತ ಸಜೀವ ದಹನ...! - farmer death in davangere

ಗುಡ್ಡಕ್ಕೆ ಬಿದ್ದ ಬೆಂಕಿಯಲ್ಲಿ 55 ವರ್ಷದ ಚಂದ್ರಪ್ಪ ಸಜೀವ ದಹನವಾದ ಹೃದಯವಿದ್ರಾವಕ ಘಟನೆ ಚನ್ನಗಿರಿ ತಾಲೂಕಿನ ಕಂಚುಗಾರನಹಳ್ಳಿ ಗ್ರಾಮದ ಬಳಿ ನಡೆದಿದೆ.

dumb-farmer-got-stuck-in-fire
dumb-farmer-got-stuck-in-fire

By

Published : Feb 4, 2020, 11:44 AM IST

ದಾವಣಗೆರೆ: ಗುಡ್ಡಕ್ಕೆ ಬಿದ್ದ ಬೆಂಕಿಯಲ್ಲಿ ಸಿಲುಕಿದ ರೈತರೊಬ್ಬರು ಸಜೀವ ದಹನವಾದ ಹೃದಯವಿದ್ರಾವಕ ಘಟನೆ ಚನ್ನಗಿರಿ ತಾಲೂಕಿನ ಕಂಚುಗಾರನಹಳ್ಳಿ ಗ್ರಾಮದ ಬಳಿ ನಡೆದಿದೆ.

ಮೂಕ ರೈತ ಸಜೀವ ದಹನ

55 ವರ್ಷದ ಚಂದ್ರಪ್ಪ ಸಜೀವ ದಹನವಾದ ರೈತ ಎಂದು ಗುರುತಿಸಲಾಗಿದೆ. ದನಗಳನ್ನು ಮೇಯಿಸಲು ಹೋದಾಗ ಗುಡ್ಡಕ್ಕೆ ಬೆಂಕಿ ಬಿದ್ದಿತ್ತು. ಈ ವೇಳೆ ಬೆಂಕಿಯ ಕೆನ್ನಾಲಗಿಗೆ ಸಿಲುಕಿದ ಚಂದ್ರಪ್ಪ ಮಾತು ಬಾರದ ಕಾರಣ ಕೂಗಲು ಆಗಿಲ್ಲ. ಚಂದ್ರಪ್ಪ ಬೆಂಕಿಗೆ ಸಿಲುಕಿದ್ದನ್ನು ಗಮನಿಸಿದ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಈ ಸಂಬಂಧ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details