ದಾವಣಗೆರೆ:ಉದ್ಯಾನವನದ ಜಾಗ ಒತ್ತುವರಿ ಮಾಡಿಕೊಂಡು ಕಟ್ಟಡಕ್ಕೆ ಅಡಿಪಾಯ ಹಾಕಿದ್ದನ್ನು ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ (DUDA) ಅಧಿಕಾರಿಗಳು ತೆರವುಗೊಳಿಸಿದರು.
ನಗರದ ಎಸ್.ಎಸ್ ಬಡಾವಣೆಯ ಬಿ ಬ್ಲಾಕ್ನಲ್ಲಿ ಉದ್ಯಾನವನದ ಜಾಗ ಒತ್ತುವರಿ ಮಾಡಿ ರಾಜ್ ಮೋಹನ್ ಎಂಬುವರು ಕಟ್ಟಡಕ್ಕೆ ಅಡಿಪಾಯ ಹಾಕಿದ್ದರಂತೆ. ಈ ಬಗ್ಗೆ ಮಾಹಿತಿ ತಿಳಿದು ಉದ್ಯಾನವನದ ದಾಖಲೆ ಪರಿಶೀಲನೆ ನಡೆಸಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನ ಹಳ್ಳಿ ಶಿವಕುಮಾರ್ ಹಾಗೂ ಆಯುಕ್ತ ಕುಮಾರಸ್ವಾಮಿ, ಉದ್ಯಾನವನ ಜಾಗದಲ್ಲಿ ಹಾಕಿದ್ದ ಅಡಿಪಾಯವನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ.