ದಾವಣಗೆರೆ:ಜಿಲ್ಲೆಯ ಹರಿಹರ ತಾಲೂಕಿನ ರಾಜನ ಹಳ್ಳಿ ಬಳಿ ಇರುವ ವಾಲ್ಮೀಕಿ ಪೀಠದಲ್ಲಿ ಎರಡು ದಿನಗಳ ಕಾಲ ನಡೆಯುವ ವಾಲ್ಮೀಕಿ ಜಾತ್ರೆಗೆ ಇಂದು ಚಾಲನೆ ನೀಡಲಾಯಿತು.
ವಾಲ್ಮೀಕಿ ಪೀಠದಲ್ಲಿ ನಡೆಯುತ್ತಿರುವ ಜಾತ್ರೆಗೆ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಪುರಿ ಶ್ರೀ ವಾಲ್ಮೀಕಿ ಪುತ್ಥಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು. ಇನ್ನು ಈ ಕಾರ್ಯಕ್ರಮವನ್ನು ಮಾಜಿ ಸಭಾಪತಿ ಕೆಬಿ ಕೋಳಿವಾಡ ಅವರಿಂದ ಉದ್ಘಾಟನೆ ಆಗಬೇಕಿತ್ತು, ಅವರು ಗೈರಾಗಿದ್ದರಿಂದ ವಾಲ್ಮೀಕಿ ಪ್ರಸನ್ನಾನಂದ ಶ್ರೀಯವರೇ ಉದ್ಘಾಟಿಸಿದರು.