ಕರ್ನಾಟಕ

karnataka

ETV Bharat / state

ಹರಿಹರ: ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್​ ಮಾಹಿತಿ ಸಾರುವ ವಾಹನಕ್ಕೆ ಚಾಲನೆ - ದಾವಣಗೆರೆ ಸುದ್ದಿ

ಹರಿಹರ ನಗರದ ಗಾಂಧಿ ಮೈದಾನದಲ್ಲಿ ಶಾಸಕ ಎಸ್.ರಾಮಪ್ಪ ಅವರ ನೇತೃತ್ವದಲ್ಲಿ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್​ ಮಾಹಿತಿಯನ್ನು ಸಾರುವ ವಾಹನಕ್ಕೆ ಚಾಲನೆ ನೀಡಲಾಯಿತು

Drive into a vehicle that communicates Crop Survey Mobile App  information
ಹರಿಹರ: ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್​ ಮಾಹಿತಿ ಸಾರುವ ವಾಹನಕ್ಕೆ ಚಾಲನೆ

By

Published : Aug 17, 2020, 10:52 PM IST

ಹರಿಹರ (ದಾವಣಗೆರೆ):ನಗರದ ಗಾಂಧಿ ಮೈದಾನದಲ್ಲಿ ಶಾಸಕ ಎಸ್.ರಾಮಪ್ಪ ಅವರ ನೇತೃತ್ವದಲ್ಲಿ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್​ ಮಾಹಿತಿಯನ್ನು ಸಾರುವ ವಾಹನಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಪಿ.ವಿ.ಗೋವರ್ಧನ್, ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಯನ್ನು ಖುದ್ದು ತಾವೇ ಮೊಬೈಲ್ ಆ್ಯಪ್‌ನಲ್ಲಿ ದಾಖಲಿಸಬಹುದಾಗಿದೆ. ಷಿ ಇಲಾಖೆ ಇತ್ತೀಚಿಗೆ ಹೊರಡಿಸಿದ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮುಖಾಂತರ ರೈತರು ತಾವು ಬೆಳೆದ ಬೆಳೆಯ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸಮೀಕ್ಷೆ ಆ್ಯಪ್‌ನಲ್ಲಿ ನೋಂದಣಿ ಮಾಡಬಹುದಾಗಿದೆ. ರೈತರು ತಾವೇ ಬೆಳೆ ಸಮೀಕ್ಷೆ ಮಾಡಿಕೊಂಡು ನಿಖರವಾದ ಮಾಹಿತಿಯನ್ನು ನೀಡುವುದರಿಂದ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.

ಬೆಳೆ ಸಮೀಕ್ಷೆ ಮಾಹಿತಿ ಆಧಾರಿಸಿ ಬೆಳೆ ಕಟಾವು ಪ್ರಯೋಗ, ನೈಸರ್ಗಿಕ ಪ್ರಕೃತಿ ವಿಕೋಪ ಬೆಳೆ ಹಾನಿ ಪರಿಹಾರ, ಬೆಳೆ ವಿಮೆ, ಕನಿಷ್ಟ ಬೆಂಬಲ ಬೆಲೆ ಸೌಲಭ್ಯ, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖಾ ಯೋಜನೆಗಳ ಫಲಾನುಭವಿಯಾಗಲು ಅರ್ಹತೆ ಮತ್ತು ಪಹಣಿಯಲ್ಲಿ ಬೆಳೆ ವಿವರ ದಾಖಲೆ ಇತ್ಯಾದಿಗಳಿಗೆ ಬೆಳೆ ಸಮೀಕ್ಷೆ ಕಡ್ಡಾಯವಾಗಿರುತ್ತದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details