ಕರ್ನಾಟಕ

karnataka

ETV Bharat / state

ವೀರೇಂದ್ರ ಹೆಗ್ಗಡೆ  ಸ್ವಸಹಾಯ ಸಂಘಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ: ಜಯಂತ ಪೂಜಾರಿ

ಡಾ. ವೀರೇಂದ್ರ ಹೆಗ್ಗಡೆ  ಎಸ್.ಕೆ.ಡಿ.ಆರ್.ಡಿ.ಪಿ ಯೋಜನೆಯನ್ನು ಸ್ಥಾಪಿಸುವ ಮೂಲಕ ಸ್ವಸಹಾಯ ಸಂಘಗಳನ್ನು ರಚಿಸಿ ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ತನ್ನದೆಯಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಜಯಂತ ಪೂಜಾರಿ ಹೇಳಿದರು.

ddharmastala_programme
ವಿಶೇಷ ಚೇತನರು ಮತ್ತು ಅನಾರೋಗ್ಯ ಪೀಡಿತರಿಗೆ ಜೀವನಾವಶ್ಯಕ ಸಲಕರಣೆಗಳ ವಿತರಣೆ

By

Published : Jan 30, 2020, 5:05 AM IST

ಹರಿಹರ (ದಾವಣಗೆರೆ) : ಡಾ. ವೀರೇಂದ್ರ ಹೆಗ್ಗಡೆ ಎಸ್.ಕೆ.ಡಿ.ಆರ್.ಡಿ.ಪಿ ಯೋಜನೆಯನ್ನು ಸ್ಥಾಪಿಸುವ ಮೂಲಕ ಸ್ವಸಹಾಯ ಸಂಘಗಳನ್ನು ರಚಿಸಿ ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ತನ್ನದೆಯಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಜಯಂತ ಪೂಜಾರಿ ಹೇಳಿದರು.

ನಗರದ ಹರ್ಲಾಪುರದಲ್ಲಿನ ಸತ್ಯ ಗಣಪತಿ ದೇವಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ, ಡಾ. ಡಿ.ವೀರೇಂದ್ರ ಹೆಗ್ಗಡೆ ರವರ 50ನೇ ವರ್ಷದ ಪಟ್ಟಾಭಿಷೇಕದ ಸಂದರ್ಭದಲ್ಲಿ ನೀಡಿದ ಆದೇಶದಂತೆ ತಾಲೂಕಿನ 50 ಜನ ವಿಶೇಷ ಚೇತನರು ಮತ್ತು ಅನಾರೋಗ್ಯ ಪೀಡಿತರಿಗೆ ಜೀವನಾವಶ್ಯಕ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಪೂಜ್ಯರು ಸ್ವಸಹಾಯ ಸಂಘಗಳನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ತನ್ನದೆಯಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಈ ಬಾರಿಯ ಪಟ್ಟಾಭಿಷೇಕದ ಸಂದರ್ಭದಲ್ಲಿ ಸಾಮಾಜಿಕವಾಗಿ ಅಸಂತೋಷವನ್ನು ಹೊಂದಿದ ಜನರಿಗೆ ಏನಾದರೂ ಸಹಾಯ ಮಾಡಬೇಕು, ಅವರೂ ಕೂಡ ಇತರರಂತೆ ತಮ್ಮ ಕೆಲಸವನ್ನು ತಾವೇ ಮಾಡಿಕೊಂಡು ಇತರರಿಗೆ ಹೊರೆಯಾಗದಂತೆ ಬದುಕಬೇಕು ಎಂಬ ದೃಷ್ಟಿಕೋನ ಇಟ್ಟುಕೊಂಡು, ಶುಭ ಕಾರ್ಯಕ್ರಮದ ಮೂಲಕ ವಿಶೇಷ ಚೇತನರು, ಅನಾರೋಗ್ಯ ಪೀಡಿತರು ಮತ್ತು ಅವರ ಕುಟುಂಬದ ಸದಸ್ಯರಿಗೆ ಅನುಕೂಲವಾಗುವಂತೆ ಈ ಸಲಕರಣೆಗಳನ್ನು ನೀಡಿದ್ದಾರೆ. ಇದರ ಸದುಪಯೋಗ ಉತ್ತಮ ರೀತಿಯಲ್ಲಿ ಪಡೆದುಕೊಳ್ಳಬೇಕು ಎಂದರು.

ತಾಲೂಕಿನ 50 ಜನ ವಿಶೇಷ ಚೇತನರು ಮತ್ತು ಅನಾರೋಗ್ಯ ಪೀಡಿತ ಫಲಾನುಭವಿಗಳಿಗೆ ವೀಲ್ ಚೇರ್, ವಾಟರ್ ಬೆಡ್, ನಾಲ್ಕು ಕಾಲಿನ ವಾಕರ್ ಮತ್ತು ಮೂರು ಕಾಲಿನ ವಾಕಿಂಗ್ ಸ್ಟಿಕ್ ಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ಬಸವರಾಜ್, ನಗರ ಸಭೆಯ ಸದಸ್ಯರಾದ ಹನುಮಂತಪ್ಪ, ಅಪೂರ್ವ ಕಣ್ಣಿನ ಆಸ್ಪತ್ರೆಯ ಮಂಜುನಾಥ್, ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಬಿ, ಒಕ್ಕೂಟದ ಅಧ್ಯಕ್ಷೆ ನಯನ, ಮೇಲ್ವಿಚಾರಕರಾದ ಬಸವರಾಜ್, ನಂದಾ, ಅನ್ನಪೂರ್ಣ, ಮಂಜುಳಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details