ದಾವಣಗೆರೆ:ದಾವಣಗೆರೆದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗು ಹಾಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಂದು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಒಟ್ಟು 293.83 ಕೋಟಿ ರೂಪಾಯಿ ಒಟ್ಟು ಆಸ್ತಿ ಇದ್ದು, 17.74 ಕೋಟಿ ರೂ. ಸಾಲ ಇದೆ ಎಂದು ಅಫಿಡವಿಟ್ನಲ್ಲಿ ನಮೂದಿಸಿದ್ದಾರೆ. 8.01 ಲಕ್ಷ ರೂ ಕೈಯಲ್ಲಿರುವ ನಗದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:3ನೇ ಪಟ್ಟಿಯಲ್ಲಿ 3 ಕುಟುಂಬಕ್ಕೆ ಬಿಜೆಪಿ ಟಿಕೆಟ್: ಶೆಟ್ಟರ್ ಜಾಗಕ್ಕೆ ಟೆಂಗಿನಕಾಯಿಗೆ ಛಾನ್ಸ್
63.96 ಕೋಟಿ ಬ್ಯಾಂಕ್ ಠೇವಣಿ ಇದ್ದು, ಶೇರುಗಳಲ್ಲಿ 85.32 ಕೋಟಿ ಹೂಡಿಕೆ ಮಾಡಲಾಗಿದೆ. ಸಾಲಗಾರರಿಂದ ಒಟ್ಟು 104 ಕೋಟಿ ರೂ ಬರಬೇಕಾಗಿದೆ. 2.25 ಕೋಟಿ ಆಭರಣ ಹಾಗು ಇನ್ನೆತರೆ ವಸ್ತುಗಳಿವೆ. ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಬಳಿ 73.26 ಲಕ್ಷದ ವಾಹನಗಳಿವೆ. 35 ಕೋಟಿ ಬೆಲೆಬಾಳುವ ಕೃಷಿಯೇತರ ಭೂಮಿ, 25 ಲಕ್ಷ ಮೌಲ್ಯದ 1100 ಚದರಡಿ ಜಾಗ ಹಾಗು ಮನೆ ಸೇರಿದಂತೆ 257.83 ಕೋಟಿ ಚರಾಸ್ತಿ ಮತ್ತು
35 ಕೋಟಿ ಸ್ಥಿರಾಸ್ತಿ ಇದೆ.
ಇದನ್ನೂ ಓದಿ:ಕೋಟಿ ಕೋಟಿ ಆಸ್ತಿಗೆ ಅಧಿಪತಿಯಾಗಿರುವ ಕಮಲ ಅಭ್ಯರ್ಥಿಗಳು: ಉದಯ್ ಗರುಡಾಚಾರ್ ಕೆಜಿ ಕೆಜಿ ಚಿನ್ನಾಭರಣದ ಕುಬೇರ!