ಕರ್ನಾಟಕ

karnataka

ETV Bharat / state

ದಾವಣಗೆರೆ: ಸಮಾನತೆ ಸಾರಿದ ಮಹಾನಾಯಕ ಅಂಬೇಡ್ಕರ್ ಜಯಂತಿ - ಮಹಾನಾಯಕ ಬಿ.ಆರ್ ಅಂಬೇಡ್ಕರ್ ಜಯಂತಿ

ಇಂದು ಸಂವಿಧಾನ ರಚನಕಾರ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ. ದೇಶಾದ್ಯಂತ ಅವರ ಜಯಂತಿ ಆಚರಣೆ ನಡೆಸಲಾಗುತ್ತಿದೆ. ಅಂತೆಯೇ ದಾವಣಗೆರೆಯಲ್ಲಿ ಕೂಡಾ ಜಿಲ್ಲಾಡಳಿತದಿಂದ ಅದ್ಧೂರಿಯಾಗಿ ಜಯಂತಿ ಆಚರಿಸಲಾಯಿತು.

davanagere
ದಾವಣಗೆರೆ

By

Published : Apr 14, 2021, 3:51 PM IST

ದಾವಣಗೆರೆ:ದೇಶದಲ್ಲಿ ಸಮಾನತೆ ಸಾರಿದ ಮಹಾನಾಯಕ ಡಾ.ಅಂಬೇಡ್ಕರ್ ಅವರ 130 ನೇ ಜಯಂತಿಯನ್ನು ಜಿಲ್ಲಾಡಳಿತದಿಂದ ಅದ್ಧೂರಿಯಾಗಿ ಆಚರಿಸಲಾಯಿತು.

ದಾವಣಗೆರೆಯಲ್ಲಿ ಅಂಬೇಡ್ಕರ್ ಅವರ ಜಯಂತಿ ಆಚರಣೆ

ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯನ್ನು ಮಾಜಿ ಸಚಿವ ಶಾಸಕ ಎಸ್.ಎ ರವೀಂದ್ರನಾಥ್ ಹಾಗೂ ಮಾಯಕೊಂಡ ಶಾಸಕ ಪ್ರೋ. ನಿಂಗಣ್ಣ ಪುಷ್ಪಾರ್ಚನೆ ಮಾಡುವ ಮೂಲಕ ಅವರ ಆದರ್ಶಗಳನ್ನು ನೆನೆಸಿದರು‌.

ಇದರೊಂದಿಗೆ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರ ಜಯಂತಿ ನಿಮಿತ್ತ ಅವರ ಭಾವ ಚಿತ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಜಂಟಿಯಾಗಿ ಪುಷ್ಟಾರ್ಚನೆ‌ ಮಾಡುವ ಮೂಲಕ ಅವರ‌ ಜಯಂತಿ ಕೂಡ ಆಚರಿಸಲಾಯಿತು.

ಈ ವೇಳೆ ಸಾಕಷ್ಟು ದಲಿತ ಪರ‌ ಸಂಘಟನೆಯ ಮುಖಂಡರು ಹಾಗೂ ಅಧಿಕಾರಿಗಳು ಜಿಪಂ ಅಧ್ಯಕ್ಷರಾದ ಶಾಂತಕುಮಾರಿ ಭಾಗಿಯಾಗಿದ್ದರು.

ABOUT THE AUTHOR

...view details