ತಂತಿ ಮೇಲೆ ನಡಿಗೆ ಎಂಬ ಸಿಎಂ ಹೇಳಿಕೆಗೆ ಅಪಾರ್ಥ ಬೇಡ.. ಎಂ ಪಿ ರೇಣುಕಾಚಾರ್ಯ - ಮುಜುಗರ ತರುವಂತಹ ಹೇಳಿಕೆ
ಸರ್ಕಾರ ನಡೆಸುವುದು ತಂತಿ ಮೇಲಿನ ನಡಿಗೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಈ ಮಾತಿಗೆ ಅಪಾರ್ಥ ಬೇಡ ಎಂದಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮಾತನಾಡಿದ್ದಾರೆ
ದಾವಣಗೆರೆ: ಸರ್ಕಾರ ನಡೆಸುವುದು ತಂತಿ ಮೇಲಿನ ನಡಿಗೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಈ ಮಾತಿಗೆ ಅಪಾರ್ಥ ಬೇಡ ಎಂದು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿ, ಅನಾವೃಷ್ಠಿಯಿಂದ ತತ್ತರಿಸಿರುವ ಸಂತ್ರಸ್ತರಿಗೆ ಪರಿಹಾರ ನೀಡಬೇಕಿದೆ. ಪ್ರತಿ ಪೈಸೆಗೂ ಮಹತ್ವ ಇದೆ. ವೀರಶೈವ ಮಠಗಳು ಅನುದಾನ ಕೇಳುತ್ತಿವೆ. ಎಲ್ಲಾ ಧರ್ಮದವರಿಗೂ ನೆರವು ನೀಡಬೇಕಿದೆ. ಹಾಗಾಗಿ ಸಿಎಂ ಈ ಹೇಳಿಕೆ ನೀಡಿದ್ದಾರೆ. ಪಕ್ಷದಲ್ಲಿ ಯಾವುದೇ ಗೊಂದಲವೂ ಇಲ್ಲ. ಭಿನ್ನಾಭಿಪ್ರಾಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಹಾಗೂ ಸಂಘಟನೆ ಒಂದೇ ರಥದ ಚಕ್ರಗಳು. ಯಾರೂ ಕೂಡ ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆ ನೀಡಬಾರದು. ಯಡಿಯೂರಪ್ಪ ಪಕ್ಷಾತೀತ, ಜನಮೆಚ್ಚಿದ ನಾಯಕ. ಯಾವುದೇ ಅಪಸ್ವರ ಪಕ್ಷದಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟರು. ವಿಜಯನಗರ ನೂತನ ಜಿಲ್ಲೆಯನ್ನಾಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವಷ್ಟು ದೊಡ್ಡವನಲ್ಲ. ಕರುಣಾಕರ ರೆಡ್ಡಿ, ಸೋಮಶೇಖರ್ ರೆಡ್ಡಿ, ಸಚಿವ ಶ್ರೀರಾಮುಲು ಅವರು ಸಿಎಂ ಜೊತೆ ಕುಳಿತು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಿ. ಅದನ್ನು ಬಿಟ್ಟು ಸರ್ಕಾರಕ್ಕೆ ಮುಜುಗರ ತರುವಂತಹ ಹೇಳಿಕೆಯನ್ನು ಯಾರೂ ನೀಡಬಾರದು ಎಂಬುದು ನನ್ನ ಅಭಿಪ್ರಾಯ ಎಂದರು.