ಕರ್ನಾಟಕ

karnataka

ETV Bharat / state

ಒಂದು ವರ್ಷದ ಮಟ್ಟಿಗೆ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಿಂದ ದೂರವಿರಿ: ಎಸ್​ಪಿ - ಕೋವಿಡ್ ನಿಯಮ ಪಾಲನೆಗಾಗಿ ಗ್ರಾಹಕರ ಪಾತ್ರ ಕುರಿತ ಸಭೆ

ಒಂದು ವರ್ಷದ ಮಟ್ಟಿಗೆ ಜನ ಧಾರ್ಮಿಕ ಕಾರ್ಯಕ್ರಮಗಳಿಂದ ದೂರ ಇರಲು ಆಗದಿದ್ದರೇ ನಾವು ಯಾವ ಕ್ರಮ ಕೈಗೊಳ್ಳುತ್ತೇವೆ. ಬಹಳ ಎಚ್ಚರವಾಗಿ ಇರಬೇಕು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

dont-celebrate-fair-and-other-festivals-sp
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ

By

Published : Apr 2, 2021, 1:41 AM IST

ದಾವಣಗೆರೆ:ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಒಂದು ವರ್ಷದ ಮಟ್ಟಿಗೆ ದೂರವಿರಿ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹನುಮಂತರಾಯ ಜನರಲ್ಲಿ ಮನವಿ ಮಾಡಿದರು.

ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೋವಿಡ್ ನಿಯಮ ಪಾಲನೆಗಾಗಿ ಗ್ರಾಹಕರ ಪಾತ್ರ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಒಂದು ವರ್ಷದ ಮಟ್ಟಿಗೆ ಜನ ಧಾರ್ಮಿಕ ಕಾರ್ಯಕ್ರಮಗಳಿಂದ ದೂರ ಇರಲು ಆಗದಿದ್ದರೇ ನಾವು ಯಾವ ಕ್ರಮ ಕೈಗೊಳ್ಳುತ್ತೇವೆ. ಬಹಳ ಎಚ್ಚರವಾಗಿ ಇರಬೇಕು ಎಂದರು.

ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿದೆ. ನಿನ್ನೆ ಮತ್ತು ಇಂದು ಎರಡಂಕಿಗೆ ಬಂದಿದೆ. ಇದು ಇಷ್ಟರಲ್ಲಿ ಮೂರು ಅಂಕಿಗೆ ತಲುಪುವುದು ದೂರವಿಲ್ಲ. ಈ ಹಿನ್ನೆಲೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುವುದು. ಕೆಲ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಇದ್ದರೂ ಯಾರು ಮಾಸ್ಕ್ ಹಾಕುತ್ತಿಲ್ಲ. ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ABOUT THE AUTHOR

...view details