ದಾವಣಗೆರೆ:ಸಾಕುನಾಯಿಯೊಂದಿಗೆ '777 ಚಾರ್ಲಿ' ಸಿನಿಮಾ ನೋಡಲು ಬಂದವನಿಗೆ ಥಿಯೇಟರ್ ಸಿಬ್ಬಂದಿ ನಿರಾಸೆ ಮೂಡಿಸಿದ್ದಾರೆ. ಶ್ವಾನವನ್ನು ಥಿಯೇಟರ್ ಒಳಗೆ ಬಿಡದ ಸಿಬ್ಬಂದಿ ವಿರುದ್ಧ ನಾಯಿಯ ಮಾಲೀಕ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಗೀತಾಂಜಲಿ ಥಿಯೇಟರ್ನಲ್ಲಿ ಭಾನುವಾರ ಘಟನೆ ನಡೆದಿದೆ.
ತನ್ನ ನೆಚ್ಚಿನ ಶ್ವಾನವನ್ನು ಒಳಗೆ ಬಿಡದಿದ್ದಕ್ಕೆ ಥಿಯೇಟರ್ ಮುಂದೆ ನಾಯಿ ಡಯಾನ ಜೊತೆ ನಗರದ ಕೆಟಿ ಜಂಬಣ್ಣ ನಗರದ ನಿವಾಸಿ ಕೆಂಚ ಎಂಬುವರು ಪ್ರತಿಭಟನೆ ನಡೆಸಿದ್ದಾರೆ. ಚಿತ್ರ ನೋಡಲು ಮುದ್ದು ಶ್ವಾನದೊಂದಿಗೆ ಬಂದಿದ್ದ ಕೆಂಚ ಶನಿವಾರವೇ ತನ್ನ ಶ್ವಾನ, ತನ್ನ ಸಹೋದರನಿಗೆ ಸೇರಿ ಒಟ್ಟು 3 ಟಿಕೆಟ್ ಬುಕ್ ಮಾಡಿದ್ದರು.