ಕರ್ನಾಟಕ

karnataka

ETV Bharat / state

ಡಾಗ್​, ಕ್ಯಾಟ್​ ಶೋ.. ನೆಚ್ಚಿನ ಪ್ರಾಣಿಗಳನ್ನು ಕಂಡು ಬೆಣ್ಣೆನಗರಿ ಮಂದಿ ಫುಲ್​​ ಫಿದಾ - ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ

ಒಂದಕ್ಕಿಂತ ಮತ್ತೊಂದು ಮುದ್ದಾದ ಶ್ವಾನಗಳು. ದೇಶಿ ತಳಿಗಳಿಂದ ಹಿಡಿದು ವಿದೇಶಿ ಹತ್ತಾರು ತಳಿಗಳ ನಾಯಿಗಳು. ಪುಟ್ಟ ಪುಟ್ಟ ನಡುಗೆಯಿಂದ ಎಲ್ಲರ ಗಮನ ಸೆಳೆದ ಪ್ರೀತಿಯ ಶ್ವಾನಗಳು. ಮತ್ತೊಂದೆಡೆ ಬೆಕ್ಕುಗಳ ಪ್ರದರ್ಶನ ಕಣ್ಮನ ಸೆಳೆಯಿತು.

dog-and-cat-show-in-davanagere
ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ: ಬೆಣ್ಣೆನಗರಿ ಮಂದಿ ಫುಲ್​​ ಫಿಧಾ..

By

Published : Oct 5, 2021, 1:50 PM IST

ದಾವಣಗೆರೆ:ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ, ಡಾಗ್ ಮತ್ತು ಕ್ಯಾಟ್ ಶೋ ಅನ್ನು ನಗರದ ಲವ್ ಪೆಟ್ ಅಸೋಷಿಯೇಷನ್ ಆಯೋಜನೆ ಮಾಡಿದ್ದು, ಕಾರ್ಯಕ್ರಮ ಯಶಸ್ವಿಯಾಗಿದೆ.

ಇತ್ತೀಚೆಗೆ ಕೊರೊನಾ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಯೋಜನೆಯಾದ ಈ ಕಾರ್ಯಕ್ರಮ ರಾಜ್ಯಮಟ್ಟದ್ದಾಗಿದೆ. ಈ ಶೋನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಸೇರಿದಂತೆ ಹಲವು ರಾಜ್ಯಗಳಿಂದ ವಿವಿಧ ತಳಿಯ ಶ್ವಾನಗಳನ್ನು ಪ್ರದರ್ಶನಕ್ಕೆ ತರಲಾಗಿತ್ತು.

ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ

ಡಾಬರ್​ಮನ್​, ಜರ್ಮನ್ ಶಫರ್ಡ್​​, ರೂಬಿ, ಫಮೇರಿಯನ್, ಫಗ್, ರೆಟ್ರಿವರ್ ಹಾಗೂ ದೇಶಿಯ ತಳಿಯಾದ ಮುಧೋಳ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ವಿವಿಧ ವಯಸ್ಸಿನ ಶ್ವಾನಗಳ ಪ್ರದರ್ಶನವನ್ನ ಆಯೋಜಿಸಲಾಗಿತ್ತು. ಮನರಂಜನೆ ಮತ್ತು ಉದ್ಯಮ ಬಗ್ಗೆ ಜನರಲ್ಲಿ ಆಸಕ್ತಿ ಬರಲೆಂದು ಈ ಶೋ ಆಯೋಜಿಸಲಾಗಿದೆ ಎಂದು ಪೆಟ್​ ಅಸೋಸಿಯೇಷನ್​ ಮುಖ್ಯಸ್ಥರು ಹೇಳಿದ್ದಾರೆ.

ಅದರಲ್ಲೂ ದೇಶಿಯ ತಳಿ ನಮ್ಮ ರಾಜ್ಯದ ಹೆಮ್ಮೆಯ ಮುಧೋಳ ಶ್ವಾನಗಳಿಗೆ ಪ್ರತ್ಯೇಕವಾದ ಕಾಂಪಿಟೇಷನ್ ಮಾಡಲಾಗಿತ್ತು, ನೆರೆದಿರುವ ಜನರು ಮುಧೋಳ ನಾಯಿಗಳನ್ನು ನೋಡಿ‌ ಫುಲ್ ಫಿದಾ ಆದರು. ಇಂಥ ಪ್ರದರ್ಶನದಿಂದ ತುಂಬಾ ಖುಷಿಯಾಗಿದೆ. ಹತ್ತಾರು ಬಗೆಯ ಶ್ವಾನ ಹಾಗೂ ಬೆಕ್ಕುಗಳನ್ನು ನೋಡಲು ಉತ್ತಮ ವೇದಿಕೆ ಸಿಕ್ಕಿದೆ ಎಂಬುದು ಪ್ರಾಣಿ ಪ್ರಿಯರ ಅಭಿಪ್ರಾಯವಾಗಿದೆ.

ವಿಶೇಷ ಎಂದರೆ ಶ್ವಾನದ ಜೊತೆಗೆ ಬೆಕ್ಕುಗಳ ಪ್ರದರ್ಶನವನ್ನೂ ಕೂಡ ಆಯೋಜಿಸಲಾಗಿತ್ತು. ಇದೇ ಮೊದಲ ಬಾರಿಗೆ ಇಂಥಹ ಅಪರೂಪದ ಸಾಕು ಬೆಕ್ಕುಗಳ ಪ್ರದರ್ಶನ ಆಯೋಜಿಸಲಾಗಿದ್ದು, ಹತ್ತಾರು ಬಗೆಯ ಬೆಕ್ಕುಗಳನ್ನು ನೋಡುವ ಅವಕಾಶ ಕಲ್ಪಿಸಲಾಗಿತ್ತು.

ಕೋವಿಡ್ ಹಿನ್ನೆಲೆ ಮನೆಯಲ್ಲೇ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಿದ್ದ ಪ್ರಾಣಿ ಪ್ರಿಯರು ಈ ಪ್ರದರ್ಶನದಲ್ಲಿ ಭಾಗಹಿಸುವ ಮೂಲಕ ಸಖತ್ ಎಂಜಾಯ್ ಮಾಡಿದರು. ಹತ್ತಾರು ಬಗೆಯ ಶ್ವಾನ ಮತ್ತು ಬೆಕ್ಕುಗಳನ್ನ ಒಂದೇ ವೇದಿಕೆಯಲ್ಲಿ ನೋಡುವ ಮೂಲಕ ಖುಷಿಪಟ್ಟರು.

ಇದನ್ನೂ ಓದಿ:ರೈತರ ಮೇಲೆ ಕಾರು ಹರಿಸಿದ ಪ್ರಕರಣ: ವಿಡಿಯೋ ಹಂಚಿಕೊಂಡ ಪ್ರಿಯಾಂಕಾ ಗಾಂಧಿ

ABOUT THE AUTHOR

...view details