ಕರ್ನಾಟಕ

karnataka

ETV Bharat / state

ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ತಂದೆ, ಮಗುವಿನ ಪ್ರಾಣ ಉಳಿಸಿದ ವೈದ್ಯ - ಬೈಕ್ ಸ್ಕಿಡ್

ದಾವಣಗೆರೆಯ ಪವಾಡ ರಂಗವ್ವನಹಳ್ಳಿಯಲ್ಲಿ ಅಪಘಾತಕ್ಕೀಡಾದ ಸವಾರನನ್ನು ರಕ್ಷಿಸಿದ ವೈದ್ಯರ ಸಮಾಜಮುಖಿ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಅಪಘಾತಕ್ಕೀಡಾದ ಸವಾರನ ಪ್ರಾಣ ಉಳಿಸಿದ ವೈದ್ಯ  doctor saved the life of an accident rider  ದಾವಣಗೆರೆಯ ಪವಾಡ ರಂಗವ್ವನಹಳ್ಳಿ  Davanagere Pavada Rangavavanahalli  ಅಪಘಾತಕ್ಕೀಡಾದ ಸವಾರ  Accidental rider  ಡಾ ರವಿಕುಮಾರ್  Dr Ravikumar  ಈಟಿವಿ ಭಾರತ ಕರ್ನಾಟಕ  ಈಟಿವಿ ಭಾರತ ಕನ್ನಡ ನ್ಯೂಸ್  ​ ETV Bharat Karnataka  ETV Bharat Kannada News  ಬೈಕ್​ನಿಂದ ಆಯಾತಪ್ಪಿ ಬಿದ್ದು ಅಪಘಾತ  Accident after falling off the bike  ಬೈಕ್ ಸ್ಕಿಡ್  Bike skid
ತಂದೆ, ಮಗುವಿನ ಪ್ರಾಣ ಉಳಿಸಿದ ವೈದ್ಯ

By ETV Bharat Karnataka Team

Published : Dec 25, 2023, 10:04 PM IST

Updated : Dec 26, 2023, 9:33 AM IST

ತಂದೆ, ಮಗುವಿನ ಪ್ರಾಣ ಉಳಿಸಿದ ವೈದ್ಯ

ದಾವಣಗೆರೆ:ವೈದ್ಯರೊಬ್ಬರುರಸ್ತೆಯಲ್ಲಿ ಬೈಕ್​ನಿಂದ ಆಯತಪ್ಪಿ ಬಿದ್ದು ಗಾಯಗೊಂಡು ನರಳುತ್ತಿದ್ದ ಸವಾರನ ಪ್ರಾಣ ಉಳಿಸಿದ್ದಾರೆ. ಈ ಘಟನೆ ದಾವಣಗೆರೆ ತಾಲೂಕಿನ ಪವಾಡ ರಂಗವ್ವನಹಳ್ಳಿಯಲ್ಲಿ ನಡೆದಿದೆ. ಡಾ.ರವಿಕುಮಾರ್ ಎಂಬವರು ದ್ವಿಚಕ್ರ ವಾಹನ ಸವಾರನನ್ನು ರಕ್ಷಿಸಿ ಮಾನವೀಯತೆ ಮೆರೆದವರು.

ಪವಾಡ ರಂಗವ್ವನಹಳ್ಳಿಯ ಸಮೀಪ ದ್ವಿಚಕ್ರ ವಾಹನ ಸವಾರ ಹಾಗು ಪುತ್ರ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದರು. ಆನಗೋಡು ಹಾಗು ಅಣಜಿ ಗ್ರಾಮಗಳ ಮಾರ್ಗವಾಗಿ ಜಗಳೂರಿಗೆ ಹೊರಟಿದ್ದ ಡಾ.ರವಿಕುಮಾರ್ ಅವರು ಬೈಕ್ ಸ್ಕಿಡ್ ಆಗಿ ಬಿದ್ದು ನರಳಾಡುತ್ತಿದ್ದ ತಂದೆ ಮತ್ತು ಚಿಕ್ಕ ಮಗುವನ್ನು ಗಮನಿಸಿದ್ದಾರೆ. ತಕ್ಷಣ ತಮ್ಮ ಕಾರು ನಿಲ್ಲಿಸಿದ ರವಿಕುಮಾರ್ ನೆರವಿಗೆ ಧಾವಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ತಂದೆ, ಮಗುವನ್ನು ತಮ್ಮ ಕಾರಿನಲ್ಲೇ ಖಾಸಗಿ ಕ್ಲಿನಿಕ್​ಗೆ ಕರೆದೊಯ್ದು ತಾವೇ ಖುದ್ದಾಗಿ ಚಿಕಿತ್ಸೆ ನೀಡಿದ್ದಾರೆ.‌

ಪ್ರಥಮ ಚಿಕಿತ್ಸೆಯ ಬಳಿಕ ದಾವಣಗೆರೆಯಿಂದ ಆಂಬ್ಯುಲೆನ್ಸ್ ಕರೆಯಿಸಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ರವಿಕುಮಾರ್ ಕೆಲ ತಿಂಗಳ ಹಿಂದಷ್ಟೇ ಜಗಳೂರಿನಿಂದ ದಾವಣಗೆರೆಗೆ ‌ವಾಪಸಾಗುವಾಗ ಇದೇ ರೀತಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದ ಸವಾರನನ್ನು ರಕ್ಷಿಸಿ ಸುದ್ದಿಯಾಗಿದ್ದರು.

ಇದನ್ನೂ ಓದಿ:ಹೊಸಕೋಟೆ: ದೇವಸ್ಥಾನಗಳಲ್ಲಿ ಪ್ರಸಾದ ಸೇವಿಸಿ 200ಕ್ಕೂ ಹೆಚ್ಚು ಜನ ಅಸ್ವಸ್ಥ; ಓರ್ವ ಮಹಿಳೆ ಸಾವು

Last Updated : Dec 26, 2023, 9:33 AM IST

ABOUT THE AUTHOR

...view details