ಕರ್ನಾಟಕ

karnataka

ETV Bharat / state

ವೈದ್ಯರ ನಿರ್ಲಕ್ಷ್ಯ ಆರೋಪ : ದಾವಣಗೆರೆಯಲ್ಲಿ ತಾಯಿ- ಮಗು ಸಾವು - ದಾವಣಗೆರೆಯಲ್ಲಿ ಗರ್ಭಿಣಿ ತಾಯಿ ಮಗು ಸಾವು

ಮಧ್ಯಾಹ್ನ ಆಸ್ಪತ್ರೆಗೆ ಆಗಮಿಸಿದ್ದ ಮಹಿಳೆಗೆ ನರ್ಸ್ ಹೆರಿಗೆ ಮಾಡಿಸಲು ಮುಂದಾಗಿದ್ದರು. ಈ ವೇಳೆ ಮಹಿಳೆಯ ಗರ್ಭಚೀಲ ಹರಿದು ಮಗು ಮತ್ತು ತಾಯಿಗೆ ತೊಂದರೆಯಾಗಿದೆ ಎನ್ನಲಾಗಿದೆ. ನಂತರ ಅಲ್ಲಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ನರ್ಸ್ ಹೇಳಿದ್ದರಂತೆ..

ದಾವಣಗೆರೆಯಲ್ಲಿ ಗರ್ಭಿಣಿ ತಾಯಿ ಮಗು ಸಾವು
ದಾವಣಗೆರೆಯಲ್ಲಿ ಗರ್ಭಿಣಿ ತಾಯಿ ಮಗು ಸಾವು

By

Published : Jan 22, 2022, 7:14 PM IST

Updated : Jan 22, 2022, 7:57 PM IST

ದಾವಣಗೆರೆ : ಜಿಲ್ಲೆಯ ಜಗಳೂರು ತಾಲೂಕಿನ ಮಲ್ಲಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆರಿಗೆಗೆ ಬಂದ ಗರ್ಭಿಣಿ ಮತ್ತು ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಸಂಬಂಧಿಕರು ಆರೋಪಿಸಿದ್ದಾರೆ.

ದಾವಣಗೆರೆಯಲ್ಲಿ ಗರ್ಭಿಣಿ ತಾಯಿ ಮಗು ಸಾವು

ಸಾವಿತ್ರಿ (32) ಎಂಬುವರು ಹಾಗೂ ಅವರ ನವಜಾತ ಶಿಶು ಸಾವನಪ್ಪಿರುವುದು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ಹೆರಿಗೆಗೆ ಅಂತಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೃತ ಮಹಿಳೆ ಸಾವಿತ್ರಿ ಮಧ್ಯಾಹ್ನ 1 ಗಂಟೆಗೆ ಬಂದಿದ್ದರಂತೆ. ಆದರೆ, ಮಹಿಳೆಗೆ ಸಾಯಂಕಾಲ 6 ಗಂಟೆಗೆ ಚಿಕಿತ್ಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ.

ಮಧ್ಯಾಹ್ನ ಆಸ್ಪತ್ರೆಗೆ ಆಗಮಿಸಿದ್ದ ಮಹಿಳೆಗೆ ನರ್ಸ್ ಹೆರಿಗೆ ಮಾಡಿಸಲು ಮುಂದಾಗಿದ್ದರು. ಈ ವೇಳೆ ಮಹಿಳೆಯ ಗರ್ಭಚೀಲ ಹರಿದು ಮಗು ಮತ್ತು ತಾಯಿಗೆ ತೊಂದರೆಯಾಗಿದೆ ಎನ್ನಲಾಗಿದೆ. ನಂತರ ಅಲ್ಲಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ನರ್ಸ್ ಹೇಳಿದ್ದರಂತೆ.

ಜಿಲ್ಲಾಸ್ಪತ್ರೆಯಲ್ಲೂ ಕುಂಟು ನೆಪ ಹೇಳಿ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದು, ಅಲ್ಲಿಯೂ ಚಿಕಿತ್ಸೆ ಫಲಿಸದೆ ತಾಯಿ ಮಗು ಕೊನೆಯುಸಿರೆಳೆದರು. ಇನ್ನು ಗ್ರಾಮದಲ್ಲಿ ಶವ ಸಂಸ್ಕಾರ ಮಾಡದೆ ತಾಯಿ-ಮಗು ಶವವಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದರು.‌

ಜಾಹಿರಾತು :ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 22, 2022, 7:57 PM IST

ABOUT THE AUTHOR

...view details