ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಲಕ್ಷಗಟ್ಟಲೆ ಹಣ ಪೀಕುವ ಡಾಕ್ಟರ್‌ಗಳೇ ಹೆಚ್ಚು. ಆದರೆ ದಾವಣಗೆರೆಯ ವೈದ್ಯರೊಬ್ಬರು ಬಡವರ ಪಾಲಿಗೆ ಆರಾಧ್ಯ ದೈವವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಆಸ್ಪತ್ರೆಗೆ ಬರುವ ಬಡ ಹಾಗೂ ಮಧ್ಯಮ ವರ್ಗದ ಜನರಿಂದ ಕೇವಲ ಮೂವತ್ತು ರೂಪಾಯಿ ಹಣಪಡೆದು ಚಿಕಿತ್ಸೆ ನೀಡುತ್ತಾ ದಾವಣಗೆರೆಯ ನಡೆದಾಡುವ ವೈದ್ಯ ದೇವರಾಗಿದ್ದಾರೆ. ರೋಗಿಗಳ ಮೇಲೆ ಇವರ ಹಸ್ತ ಸ್ಪರ್ಷವಾದ್ರೆ ಸಾಕು ತಮ್ಮಲ್ಲಿರುವ ಕಾಯಿಲೆ ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ.
ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿ ಕ್ಲಿನಿಕ್ ಇಟ್ಟಿಕೊಂಡು ಇವರು ಬಡ ರೋಗಿಗಳ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಎಸ್ ಎಂ ಎಲಿ ಯವರು ದಾವಣಗೆರೆಯ ಪ್ರತಿಷ್ಠಿತ ಜೆಜೆಎಂ ಮೆಡಿಕಲ್ ಕಾಲೇಜ್ ನಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ 2005 ರಲ್ಲಿ ನಿವೃತ್ತಿ ಹೊಂದಿ ನಂತರ ಬಡ ರೋಗಿಗಳ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಾರೆ.
ವಿಶೇಷ ಅಂದ್ರೆ ಹಣ ಇಲ್ಲ ಎಂದು ಆಸ್ಪತ್ರೆಗೆ ಬರುವವರಿಗೆ ಹಣ ಇಲ್ಲದೆ ಚಿಕಿತ್ಸೆ ನೀಡುವ ಮೂಲಕ ಔಷಧ ಕೂಡ ನೀಡ್ತಾರೆ. ಇದರಿಂದ ಇವರ ಬಳಿ ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. 84 ರ ಇಳಿ ವಯಸ್ಸಿನಲ್ಲಿ ಬೇಸರಪಟ್ಟುಕೊಳ್ಳದೆ ಬಂದಿರುವ ರೋಗಿಗಳನ್ನು ವಾಪಸ್ ಕಳುಹಿಸದೆ ಚಿಕಿತ್ಸೆ ಕೊಡುತ್ತಾರೆ.