ದಾವಣಗೆರೆ: ನಾನು ಕಷ್ಟದಲ್ಲಿ ಇದ್ದಾಗ ನೀವು ಪ್ರೀತಿ ತೋರಿದರಲ್ಲ ಅದಕ್ಕೆ ಧನ್ಯವಾದಗಳು. ಹೀಗಾಗಿಯೇ ನಾನು ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ನಾನು ಕಷ್ಟದಲ್ಲಿದ್ದಾಗ ನನ್ನ ಪರವಾಗಿ ನೀವು ನಿಂತಿದ್ರಿ, ನಿಮಗೆ ಧನ್ಯವಾದ ಹೇಳಲು ಬಂದಿದ್ದೇನೆ: ಡಿಕೆಶಿ - Latest News For DKS
ನಾನು ಕಷ್ಟದಲ್ಲಿ ಇದ್ದಾಗ ನೀವು ಪ್ರೀತಿ ತೋರಿದರಲ್ಲ ಅದಕ್ಕೆ ಧನ್ಯವಾದಗಳು. ಹೀಗಾಗಿಯೇ ನಾನು ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಹೊನ್ನಾಳಿ ತಾಲೂಕಿನ ಹಿರೇಕಲ್ಮಠದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಮಾತನಾಡಿದ ಅವರು, ನನ್ನ ಬಿಡುಗಡೆಗೆ ಪೂಜೆ, ಪುನಸ್ಕಾರ ಮಾಡಿ ನನಗೆ ಯಾವುದೇ ಆಪತ್ತು ಬಾರದಂತೆ ನೋಡಿಕೊಂಡು ಜೈಲಿಗೆ ಹೋದಾಗ ನನ್ನನ್ನು ಪ್ರೀತಿಯಿಂದ 45 ದಿನಕ್ಕೆ ವಾಪಸ್ ಬರುವಂತೆ ಮಾಡಿದ್ದೀರ. ನನಗೆ ನಿಮ್ಮ ಶಿಳ್ಳೆ, ಚಪ್ಪಾಳೆ ಬೇಡ. ನಿಮ್ಮ ಪ್ರೀತಿ ಬೇಕು ಅಷ್ಟೇ ಎಂದ್ರು.
ರೈತ ದೇಶದ ಬೆನ್ನೆಲುಬು. ನಾನು ಒಕ್ಕಲಿಗ ಎಂದು ನನ್ನ ಜಾತಿಯಲ್ಲೇ ಬಂದಿದೆ. ಯಾರು ಒಕ್ಕುಲು ಮಾಡುತ್ತಾರೋ ಅವರೆಲ್ಲರದ್ದೂ ಒಂದೇ ಜಾತಿ, ಅದೇ ವಿಶ್ವ ಜಾತಿ. ಈ ರೈತ ಜಾತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.