ಕರ್ನಾಟಕ

karnataka

ETV Bharat / state

ಮೀಸಲಾತಿ ಹೋರಾಟಕ್ಕೆ ಅಡಿಗಲ್ಲು ಹಾಕಿದವರು ನಾವು, ನಮ್ಮನ್ನು ಮರೆಯಬೇಡಿ : ಡಿಕೆಶಿ ಮನವಿ - ವಾಲ್ಮಿಕಿ ಮೀಸಲಾತಿ ಕುರಿತು ಡಿಕೆಶಿ ಭಾಷಣ

ಹಾರ, ಸನ್ಮಾನಕ್ಕಾಗಿ ನಾನಿಂದು ಜಾತ್ರೆಗೆ ಬಂದಿಲ್ಲ. ಕಾಂಗ್ರೆಸ್ ನಿಮ್ಮೊಂದಿಗಿದೆ ಎಂದು ಹೇಳಲು ಬಂದಿದ್ದೇನೆ. ನ್ಯಾ. ನಾಗಮೋಹನದಾಸ್ ವರದಿ ಜಾರಿಗೆ ತರಲು ನಾವು ಕೂಡ ಒತ್ತಾಯಿಸುತ್ತೇವೆ. ನಿಮ್ಮ ಹಕ್ಕನ್ನು ನೀವು ಕೇಳ್ತಿದ್ದಿರಿ ತಪ್ಪೇನಿಲ್ಲ..

DKS Statement about Valmiki reservation fight
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

By

Published : Feb 9, 2021, 8:51 PM IST

ದಾವಣಗೆರೆ :ಮೀಸಲಾತಿ ಹೆಚ್ಚಿಸುವ ವಿಚಾರಕ್ಕೆ ನಮ್ಮ ಬೆಂಬಲ ಇದೆ. ಮೀಸಲಾತಿ ಹೋರಾಟಕ್ಕೆ ಅಡಿಗಲ್ಲು ಹಾಕಿದವರು ನಾವು, ನಮ್ಮನ್ನು ಮರೆಯಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವಿ ಮಾಡಿದರು.

ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿದ ಅವರು, ಎಲ್ಲಾ ಹಿರಿಯರು, ನಾಯಕರು, ಸ್ವಾಮೀಜಿಗಳು ಮಾತನಾಡಿದ ಮೇಲೆ ನಮ್ಮ ಮಾತಿಗೆ ರಸ ಇರಲ್ಲ. ಸಿಎಂ, ಸ್ವಾಮೀಜಿಗಳು ಮಾತನಾಡಿದ್ದನ್ನು ನಾನು ಗಮನಿಸಿದ್ದೇನೆ. ಸ್ವಾಮೀಜಿ ಹೋರಾಟ, ಛಲ,ಕಳಕಳಿ ಆವೇಶದಿಂದ ಮಾತನಾಡಿರಬಹುದು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಓದಿ : ವಾಲ್ಮೀಕಿ ಗುರುಪೀಠ ಅಭಿವೃದ್ಧಿಗೆ 10.8 ಕೋಟಿ ಅನುದಾನ ಬಿಡುಗಡೆ: ಸಿಎಂ ಬಿಎಸ್​ವೈ

ರಾಜಕಾರಣಿಗಳು ಉನ್ನತ ‌ಸ್ಥಾನದಲ್ಲಿದ್ದರೂ ಜವಾಬ್ದಾರಿ ಮರೆಯುತ್ತೇವೆ. ಹಾರ, ಸನ್ಮಾನಕ್ಕಾಗಿ ನಾನಿಂದು ಜಾತ್ರೆಗೆ ಬಂದಿಲ್ಲ. ಕಾಂಗ್ರೆಸ್ ನಿಮ್ಮೊಂದಿಗಿದೆ ಎಂದು ಹೇಳಲು ಬಂದಿದ್ದೇನೆ. ನ್ಯಾ. ನಾಗಮೋಹನದಾಸ್ ವರದಿ ಜಾರಿಗೆ ತರಲು ನಾವು ಕೂಡ ಒತ್ತಾಯಿಸುತ್ತೇವೆ. ನಿಮ್ಮ ಹಕ್ಕನ್ನು ನೀವು ಕೇಳ್ತಿದ್ದಿರಿ ತಪ್ಪೇನಿಲ್ಲ.

ಶೈಕ್ಷಣಿಕವಾಗಿ ನಿಮಗೆ ಅವಕಾಶ ಸಿಗಬೇಕು, ನಿಮಗೆಲ್ಲರಿಗೂ ಶಕ್ತಿ ಮಾರ್ಗದರ್ಶನ ಸಿಗುವುದೆಂಬ ನಂಬಿಕೆ ಇದ್ದು, ರಾಜಕಾರಣಿಗಳು ಸಮಾಜದ ತಂಟೆಗೆ ಹೋಗಬಾರದು, ಸಿಎಂ ಬಿಎಸ್ವೈ ವಿಚಾರಕ್ಕೆ ನಾ ಹೋಗಲ್ಲ ಎಂದು ಹೇಳಿದರು.

ABOUT THE AUTHOR

...view details