ದಾವಣಗೆರೆ :ಮುಖ್ಯಮಂತ್ರಿಗಳ ಸಿಡಿ ಇದೆ ಎಂದು ಶಾಸಕ ಯತ್ನಾಳ್ ಹೇಳಿಕೆಗೆ ಸಿಎಂ ರಿಯ್ಯಾಕ್ಟ್ ಮಾಡಿದ್ದಾರಾ.? ಇಲ್ಲ ಯತ್ನಾಳ್ ವಿರುದ್ಧ ಸಿಎಂ, ಕೇಂದ್ರ ವರಿಷ್ಠರು ಕ್ರಮ ತೆಗೆದುಕೊಂಡಿದ್ದಾರಾ..? ಎಂದು ದಾವಣಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸಿಡಿ ತೋರಿಸಿದರೆ ಅರ್ಧಗಂಟೆಯಲ್ಲಿ ರಾಜೀನಾಮೆ ಕೊಡಬೇಕಾಗುತ್ತೆ ಅಂತ ಯತ್ನಾಳ್ ಹೇಳಿದ್ದಾರೆ. ಯತ್ನಾಳ್ನ ಸಿಎಂ ಬಂಧಿಸಬೇಕಿತ್ತು, ಇದರ ಬಗ್ಗೆ ಹೋಮ್ ಮಿನಿಸ್ಟರ್ ಮಾತನಾಡಲಿಲ್ಲ, ಹೋಮ್ ಮಿನಿಸ್ಟರ್ ಬೇರೆದೆಲ್ಲಾ ಮಾತಾಡ್ತಾರೆ. ಆದ್ರೇ, ಇದನ್ನು ಮಾತಾಡ್ತಿಲ್ಲ, ಅವರ ಒಳಗುಟ್ಟು ಏನ್ ಇದೆ ಅಂತ ಅವರಿಗೆ ಮಾತ್ರ ಗೊತ್ತು, ನಮಗೇನ್ ಗೊತ್ತು ಎಂದರು.
ಲಾಕ್ಡೌನ್ ಸಂದರ್ಭದಲ್ಲಿ ಫೈನಾನ್ಸಿಯಲ್ ಪ್ಯಾಕೇಜ್ ಕೊಡಿ ಎಂದು ಹೇಳಿದ್ವಿ. ಒಬ್ಬರಿಗೆ ಹತ್ತತ್ತು ಸಾವಿರ ಕೊಡಿ ಎಂದು ಹೇಳಿದ್ದೆವು. ಅವರು 2-3 ಸಾವಿರ ಕೊಡ್ತಾರೆ, ಅವ್ರೆಲ್ಲಾ 2-3 ಸಾವಿರಕ್ಕೆ ಆನ್ಲೈನ್ ಅರ್ಜಿ ಹಾಕಿ ಮನೆ ಬಾಗಿಲಲ್ಲಿ ನಿಂತುಕೊಳ್ಳೋದಿಲ್ಲ ಎಂದಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಕುರಿತು ಡಿಕೆಶಿ ಪ್ರತಿಕ್ರಿಯೆ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಖಂಡ್ರೆ ಕಿಡಿ:ಆಕ್ಸಿಜನ್ ಕೊರತೆ, ರೆಮ್ಡಿಸಿವಿರ್ ಬೆಡ್, ಐಸಿಯು ಕೊರತೆಯಿಂದ ಜನ ಸಾಯುತ್ತಿದ್ದಾರೆ. ಆಕ್ಸಿಜನ್, ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾಯಿತು.
ಈಗ ಮತ್ತೆ ಜೀವ ಉಳಿಸುವ ಲಸಿಕೆ ಸಹ ಕಾಳ ಸಂತೆಯಲ್ಲಿ ಮಾರಾಟವಾಗುವ ಸಂದರ್ಭ ಉದ್ಭವವಾಗಿದೆ. ಲಸಿಕೆಯಲ್ಲಿ ರಾಜ್ಯಕ್ಕೆ ಬೇರೆ ದರ, ಖಾಸಗಿಗೆ ಬೇರೆ ದರ ಕೇಂದ್ರಕ್ಕೆ ಬೇರೆ ದರ, ಹೀಗೆ ಮೂರು ಮುರು ದರ ಇಡುವ ಮೂಲಕ ಖಾಸಗಿಗೆ ಲಾಭ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.