ಹರಿಹರ: ಬೆಳ್ಳೂಡಿ ಮತ್ತು ರಾಮತೀರ್ಥ ಗ್ರಾಮಗಳ ನಡುವಿನ ಸೂಳೆಕೆರೆ ಹಳ್ಳದ ಸೇತುವೆ ರಸ್ತೆಯು ಮಳೆಯ ನೀರಿನಿಂದ ಕೊಚ್ಚಿ ಹೋಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿದಾಗ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
ಹರಿಹರದಲ್ಲಿ ಅಧಿಕಾರಿಗಳಿಗೆ ರೈತರಿಂದ ತರಾಟೆ - Bridge collapse
ಜಿಲ್ಲಾಧಿಕಾರಿ ನೀಡಿದ ಸಲಹೆಯಂತೆ ತಾಲೂಕು ಅಧಿಕಾರಿಗಳು ನಡೆದುಕೊಳ್ಳದ ಕಾರಣ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಾರಣ ಏನು?:ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡಿದ ಸಲಹೆಯಂತೆ ತಾಲೂಕು ಅಧಿಕಾರಿಗಳು ನಡೆದುಕೊಂಡಿಲ್ಲ. ಹೀಗಾಗಿ ರೈತರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ರೈತರ ಬೇಡಿಕೆ ಏನು: ಕೊಚ್ಚಿ ಹೋಗಿರುವ ರಸ್ತೆಯನ್ನು ಸೂಕ್ತ ರೀತಿಯಲ್ಲಿ ಸರಿಪಡಿಸಬೇಕು. ಮತ್ತೆ ಮಳೆ ಬಂದಾಗ ರೈತರ ಜಮೀನುಗಳಿಗೆ ನೀರು ನುಗ್ಗದಂತೆ ಕಾಮಗಾರಿ ನಡೆಸಬೇಕು. ಆದರೆಜಿಲ್ಲಾಧಿಕಾರಿ ಭರವಸೆ ನೀಡಿದ ರೀತಿಯಲ್ಲಿ ಅಧಿಕಾರಿಗಳು ಕಾಮಗಾರಿ ನಡೆಸಿದರೆ ನಮ್ಮ ತಕರಾರು ಇಲ್ಲ. ಡಿಸಿ ಆದೇಶವನ್ನೇ ತಿರುಚಿದರೆ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ರೈತರು ಅಧಿಕಾರಿಗಳಿಗೆ ಎಚ್ಚರಿಸಿದರು.