ಹರಿಹರ(ದಾವಣಗೆರೆ):ಕೊರೊನಾ ಬಗ್ಗೆ ಪ್ರತಿಯೊಬ್ಬರೂ ಜಾಗ್ರತೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಅಪಾಯಕ್ಕೆ ಬೀಳುವುದರ ಜೊತೆಗೆ ತಮ್ಮ ಸುತ್ತಮುತ್ತಲಿನ ಜನರಿಗೂ ವೈರಸ್ ಹರಡಲು ಕಾರಣರಾಗುತ್ತೀರಿ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ಹರಿಹರದಲ್ಲಿ ಕೊರೊನಾ ಪ್ರಕರಣ ಇಲ್ಲದಿರುವುದು ಹೆಮ್ಮೆಯ ವಿಷಯ: ದಾವಣಗೆರೆ ಡಿಸಿ - ದಾವಣಗೆರೆ ಕೊರೊನಾ ಭೀತಿ
ಹರಿಹರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಇಲ್ಲದಿರುವುದು ಹೆಮ್ಮೆಯ ವಿಷಯ. ಇದೇ ರೀತಿಯಲ್ಲಿ ಮುಂದುವರಿಯಬೇಕೆಂದರೆ ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನ ಪಾಲನೆ ಮಾಡುವುದರ ಮೂಲಕ ನಗರ ಮತ್ತು ತಾಲೂಕಿನಲ್ಲಿ ಕೊರೊನಾ ವೈರಸ್ ಹರಡದಂತೆ ಜಾಗೃತಿ ವಹಿಸಬೇಕಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
![ಹರಿಹರದಲ್ಲಿ ಕೊರೊನಾ ಪ್ರಕರಣ ಇಲ್ಲದಿರುವುದು ಹೆಮ್ಮೆಯ ವಿಷಯ: ದಾವಣಗೆರೆ ಡಿಸಿ District Collector Mahantesh distrubuted food kit in harihara](https://etvbharatimages.akamaized.net/etvbharat/prod-images/768-512-7301204-830-7301204-1590138272142.jpg)
ಹರಿಹರದಲ್ಲಿರುವ ಬಡವರಿಗೆ ದಿನಸಿ ಕಿಟ್ ವಿತರಿಸಿ ಬಳಿಕ ಮಾತನಾಡಿದ ಅವರು, ದಾವಣಗೆರೆ ನಗರದಲ್ಲಿ ದಿನೇ ದಿನೆ ಕೊರೊನಾ ಕೇಸ್‌ಗಳು ಹೆಚ್ಚುತ್ತಿವೆ. ನಾವು ಮತ್ತು ಪೊಲೀಸ್ ಇಲಾಖೆಯವರು ಹತೋಟಿಗೆ ತರಲು ನಿರಂತರವಾಗಿ ಶ್ರಮಿಸುತ್ತಿದ್ದರೂ ಕೂಡ ಜನರ ನಿರ್ಲಕ್ಷ್ಯದಿಂದ ಮತ್ತೆ ಕೇಸ್‌ಗಳು ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ಹರಿಹರ ನಗರದಲ್ಲಿ ಇದುವರೆಗೆ ಪಾಸಿಟಿವ್ ಪ್ರಕರಣ ಪತ್ತೆ ಆಗದೆ ಇರುವುದು ಹೆಮ್ಮೆ ಅನಿಸುತ್ತದೆ.
ಇದೇ ರೀತಿಯಲ್ಲಿ ಮುಂದುವರಿಯಬೇಕೆಂದರೆ ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನ ಪಾಲನೆ ಮಾಡುವುದರ ಮೂಲಕ ನಗರ ಮತ್ತು ತಾಲೂಕಿನಲ್ಲಿ ಕೊರೊನಾ ವೈರಸ್ ಹರಡದಂತೆ ಜಾಗೃತಿ ವಹಿಸಬೇಕಾಗಿದೆ ಎಂದರು.