ದಾವಣಗೆರೆ:ನಾವು ರೆಸಾರ್ಟ್ ರಾಜಕಾರಣ ಮಾಡಲ್ಲ, ಪಂಚತಾರಾ ಹೋಟೆಲ್ನಲ್ಲಿ ಸಭೆ ನಡೆಸೋಲ್ಲ, ಆದ್ರೆ ಎಲ್ಲೋ ಒಂದು ಕಡೆ ಸಭೆ ಮಾಡುತ್ತೇವೆ. ನಾಳೆ ಬೆಂಗಳೂರಲ್ಲಿ ಅಸಮಾಧಾನಿತ ಶಾಸಕರ ಸಭೆ ಫಿಕ್ಸ್ ಆಗಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಸಭೆಯಲ್ಲಿ ಪಾಲ್ಗೊಳ್ಳುವ ಶಾಸಕರ ಸಂಖ್ಯೆ ಎಷ್ಟು ಅಂತ ಹೇಳಲ್ಲ. ನಾಳೆವರೆಗೂ ಕಾಯ್ದು ನೋಡಿ. ಮುಖ್ಯಮಂತ್ರಿಗಳ ಬಗ್ಗೆ ಆಪಾರ ಗೌರವ ಪ್ರೀತಿ ಇದೆ. ನಮ್ಮನ್ನು ಬಿ ಫಾರಂ ನೀಡಿ ರಾಜಕೀಯವಾಗಿ ಬೆಳೆಸಿರೋದು ಯಡಿಯೂರಪ್ಪನವರು. ನಾವು ಅಸಮಾಧಾನಿತರಲ್ಲ, ಬಂಡಾಯವಲ್ಲ, ನಾಯಕರಲ್ಲ, ರೆಬಲ್ಗಳಲ್ಲ, ನಮ್ಮ ನೋವುಗಳನ್ನು ವರಿಷ್ಠರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.