ಕರ್ನಾಟಕ

karnataka

ETV Bharat / state

ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ನೀಡಲು ಹಣಕ್ಕಾಗಿ ಆಮಿಷ ಆರೋಪ - ಪಡಿತರ ನೀಡಲು ಹಣ

ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ ಪಡಿತರ ನೀಡಲು ಹಣ ತೆಗೆದುಕೊಂಡ ಆರೋಪ ಕೇಳಿ ಬಂದಿದೆ. ಹಣ ಪಡೆಯುತ್ತಿರುವ ನ್ಯಾಯ ಬೆಲೆ ಅಂಗಡಿ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.‌

Did they took the money  for rations?
ಪಡಿತರ ನೀಡಲು ಹಣ ತೆಗೆದುಕೊಂಡರೇ ನ್ಯಾಯ ಬೆಲೆ ಅಂಗಡಿಯಲ್ಲಿ?

By

Published : Apr 12, 2020, 2:54 PM IST

ದಾವಣಗೆರೆ:ಲಾಕ್​ಡೌನ್ ಹಿನ್ನೆಲೆಯಲ್ಲಿ‌ ಉಚಿತವಾಗಿ ಪಡಿತರ ವಿತರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ, ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ ಪಡಿತರ ನೀಡಲು ಹಣ ತೆಗೆದುಕೊಂಡ ಆರೋಪ ಕೇಳಿ ಬಂದಿದೆ.

ಪಡಿತರ ನೀಡಲು ಹಣ ತೆಗೆದುಕೊಂಡರೇ ನ್ಯಾಯ ಬೆಲೆ ಅಂಗಡಿಯಲ್ಲಿ?

ತೆಲಗಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ, ಗೋಧಿ ಸೇರಿದಂತೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಬಿಪಿಎಲ್ ಕಾರ್ಡ್ ಇದ್ದರೂ ಹತ್ತು ಕೆ.ಜಿ‌ ಅಕ್ಕಿ ಪಡೆಯಲು ಹತ್ತು ರೂಪಾಯಿಯನ್ನು ಅಂಗಡಿ ಸಿಬ್ಬಂದಿ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ಗ್ರಾಮದಲ್ಲಿ ಬಡವರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಾಕ್​ಡೌನ್ ಹಿನ್ನೆಲೆ‌ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದಾರೆ.‌ ಹಣ ಕೊಟ್ಟರೆ ಮಾತ್ರ ಪಡಿತರ ನೀಡುತ್ತಿದ್ದಾರೆ. ಇಲ್ಲದಿದ್ದರೆ ಒಟಿಪಿ ಬಂದಿಲ್ಲ ಸೇರಿದಂತೆ ಇತರೆ ಕಾರಣ ನೀಡಿ ಆಮೇಲೆ‌ ಬನ್ನಿ ಎಂದು ಸತಾಯಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅಧಿಕಾರಿಗಳು ಕೂಡಲೇ ಜನರಿಂದ ಹಣ ವಸೂಲಿ‌ ಮಾಡುತ್ತಿರುವ ನ್ಯಾಯಬೆಲೆ ಅಂಗಡಿ‌ ಮಾಲಿಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜನರು ಆಗ್ರಹಿಸಿದ್ದಾರೆ.‌

ABOUT THE AUTHOR

...view details