ದಾವಣಗೆರೆ: ಜನವರಿ 15 ರಂದು ಧಾರವಾಡದ ಇಟ್ಟಿಗಟ್ಟಿ ಗ್ರಾಮದ ಬೈಪಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಧಾರವಾಡ ಬಳಿ ಟೆಂಪೋಗೆ ಟಿಪ್ಪರ್ ಡಿಕ್ಕಿ ಪ್ರಕರಣ: ಮತ್ತೋರ್ವ ಮಹಿಳೆ ಸಾವು - Dharwad accident case updates
14:22 January 24
ಧಾರವಾಡದ ಇಟ್ಟಿಗಟ್ಟಿ ಗ್ರಾಮದ ಬೈಪಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮತ್ತೋರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೇದಾ ಮಂಜುನಾಥ್ (46) ಸಾವನ್ನಪ್ಪಿದ್ದಾರೆ. ದಾವಣಗೆರೆಯಿಂದ ಸ್ನೇಹಿತೆಯರ ಜೊತೆಗೆ ಗೋವಾಕ್ಕೆ ಹೋಗುತ್ತಿದ್ದ ವೇಳೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಧಾರವಾಡದಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ಸಾಗಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟಾದ ಹಿನ್ನೆಲೆ ಚಿಕಿತ್ಸೆ ಫಲಕಾರಿ ಆಗದೇ ವೇದಾ ಮಂಜುನಾಥ್ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಬದುಕು ನುಂಗಿದ ಸಂಕ್ರಮಣ ಪ್ರಯಾಣ: ಬಾಲ್ಯ ಸ್ನೇಹಿತೆಯರ ಬದುಕು ಕಸಿದುಕೊಂಡ ಗೋವಾ ತೀರ ಯಾನ!
ಮೃತ ವೇದಾ ಅವರ ಪತಿ ಮಂಜುನಾಥ ದಾವಣಗೆರೆಯಲ್ಲಿ ಉದ್ಯಮಿಯಾಗಿದ್ದು, ಶಿವಮೊಗ್ಗದ ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರ ಅವರ ಸಂಬಂಧಿ. ಅಪಘಾತದಲ್ಲಿ ದಾವಣಗೆರೆಯ 9 ಜನ ಮಹಿಳೆಯರು ಸಾವನ್ನಪ್ಪಿದ್ದರು. ಇದೀಗ ಸಾವಿನ ಸಂಖ್ಯೆ 10 ಕ್ಕೆ ಏರಿಕೆ ಆಗಿದೆ.